ಮಧ್ಯಪ್ರದೇಶ: ಶಾಲೆ ಎದುರೇ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ
16 ವರ್ಷದ ಅಪ್ರಾಪ್ರ ಬಾಲಕಿಯೊಬ್ಬಳನ್ನು ಆಕೆಯ ಶಾಲೆಯ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶ ಅನುಪ್ಪುರ್ ಜಿಲ್ಲೆಯ ಕೊಟ್ಮಾ ಎಂಬ ಪ್ರದೇಶದಲ್ಲಿ ಗುರುವಾರ ನಡೆದಿದೆ...
ಅನುಪ್ಪುರ್: 16 ವರ್ಷದ ಅಪ್ರಾಪ್ರ ಬಾಲಕಿಯೊಬ್ಬಳನ್ನು ಆಕೆಯ ಶಾಲೆಯ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶ ಅನುಪ್ಪುರ್ ಜಿಲ್ಲೆಯ ಕೊಟ್ಮಾ ಎಂಬ ಪ್ರದೇಶದಲ್ಲಿ ಗುರುವಾರ ನಡೆದಿದೆ.
ಆಲ್ ಗರ್ಲ್ಸ್ ಗವರ್ನ್ಮೆಂಟ್ ಶಾಲೆಯಲ್ಲಿ 11ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶಾಲೆಗೆ ಹೋಗುತ್ತಿದ್ದ ಬಾಲಕಿಯ ಹಿಂದೆಯೇ ಬಂದಿರುವ ದುಷ್ಕರ್ಮಿ ಮಚ್ಚಿನಿಂದ ಆಕೆಯ ಕತ್ತನ್ನು ಸೀಳಿಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವದಿಂದಾಗಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆಂದು ಅಧಿಕಾರಿಗಳು ಹೇಳಿದ್ದಾರೆ.
ದಿಲೀಪ್ ಸಾಹು ಎಂಬಾತನ ಮೇಲೆ ಬಾಲಕಿಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ದಿಲೀಪ್ ನನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬಾಲಕಿಗೆ ದಿಲೀಪ್ ಹಲವು ಬಾರಿ ಚುಡಾಯಿಸಿದ್ದಲ್ಲದೆ, ಆಕೆಯ ಮೇಲೆ ದೌರ್ಜನ್ಯವೆಸಗಿದ್ದ. ಈ ಹಿನ್ನಲೆಯಲ್ಲಿ 2014ರಲ್ಲಿ ದಿಲೀಪ್ ವಿರುದ್ಧ ಬಾಲಕಿ ಮತ್ತು ಮತ್ತವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರತ್ಯಕ್ಷದರ್ಶಿಗಳು, ಬಾಲಕಿ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಹಿಂದೆ ವ್ಯಕ್ತಿಯೊಬ್ಬ ಹೋಗುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆಯೇ ಆಕೆಗೆ ಹೊಡೆಯಲು ಆರಂಭಿಸಿದ್ದ. ಕೂಡಲೇ ನಾನು ಕೂಗಿಕೊಳ್ಳಲು ಆರಂಭಿಸಿದ್ದೆ. ನಂತರ ದುಷ್ಕರ್ಮಿ ಸ್ಥಳದಿಂದ ಓಡಿಹೋದ ಎಂದು ಹೇಳಿದ್ದಾರೆ.