ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ಶ್ರೀನಗರ: ಬಡತನದ ವಿರುದ್ಧ ಹೋರಾಡಲು ಪಾಕಿಸ್ತಾನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಲಹೆಗಳನ್ನು ಅನುಸರಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಬುಧವಾರ ಹೇಳಿದ್ದಾರೆ.
ಶಾಸನಸಭೆಯಲ್ಲಿ ಮಾತನಾಡಿರುವ ಮುಫ್ತಿಯವರು, ದೇಶದ ವಿರುದ್ಧ ಹೋರಾಟ ಮಾಡುವ ಬದಲು ಇಸ್ಲಾಮಾಬಾದ್ ಬಡತನದ ವಿರುದ್ಧ ಹೋರಾಟ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವಲ ಸಲಹೆಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಗಡಿಯಲ್ಲಿ ಬಂಕರ್ ಗಳನ್ನು ಸ್ಥಾಪನೆ ಮಾಡುವುದು ಸಮಸ್ಯೆಗೆ ದೀರ್ಘಕಾಲಿಕ ಪರಿಹಾರವಾಗುವುದಿಲ್ಲ. ಒಗ್ಗಟ್ಟಿನಿಂದ ಬದುಕುವುದನ್ನು ನಾವು ಕಲಿಯಬೇಕಿದೆ. ಒಬ್ಬರ ನಡುವೆ ಒಬ್ಬರು ಹೋರಾಟ ಮಾಡುವ ಬದಲು ಬಡತನದ ವಿರುದ್ಧ ರೋರಾಟ ಮಾಡಬೇಕಿದೆ. ಬಡತನದ ವಿರುದ್ಧ ಗಂಭೀರವಾಗಿ ಹೋರಾಟ ಮಾಡಲು ಪಾಕಿಸ್ತಾನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಲಹೆಗಳನ್ನು ಪಾಕಿಸ್ತಾನ ಅನುಸರಿಸಲಿಗೆ ಎಂದು ನಂಬಿದ್ದೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics