ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬೆಂಗಳೂರು: ಇಂಡಿಗೋ ವಿಮಾನಗಳ ಮುಖಾಮುಖಿ; ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ

ಆಗಸದಲ್ಲಿ ವಿಮಾನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಬೇಕಾದ ದೊಡ್ಡ ದುರಂತವೊಂದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಜು.10 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

ಸಂಗ್ರಹ ಚಿತ್ರ
Manjula VN
Updated On : 12 Jul 2018, 2:47 am
ನವದೆಹಲಿ: ಆಗಸದಲ್ಲಿ ವಿಮಾನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಬೇಕಾದ ದೊಡ್ಡ ದುರಂತವೊಂದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಜು.10 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 
ಜು.10 ರಂದು ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಇಂಡಿಯೋ ವಿಮಾನವೊಂದು ಹೊರಟಿತ್ತು. ಇದೇ ವೇಳೆಗೆ ಹೈದರಾಬಾದ್'ನಿಂದ ಕೊಯಿಮತ್ತೂರಿಗೆ ಮತ್ತೊಂದು ಇಂಡಿಗೋ ವಿಮಾನ ಕೂಡ ಹೊರಟಿತ್ತು. 
ಬೆಂಗಳೂರಿನ ವಾಯುಮಾರ್ಗ ಪ್ರದೇಶದ ವ್ಯಾಪ್ತಿಯಲ್ಲಿ 2 ವಿಮಾನಗಳು ಪರಸ್ಪರ ಎದುರಾಗಿ ಕೇವಲ 4 ಮೈಲಿ ಅಂತರದಲ್ಲಿದ್ದ ಸಂದರ್ಭದಲ್ಲಿ ಮುಖಾಮುಖಿ ಡಿಕ್ಕಿ ಹೊಡೆಯುವ ಕುರಿತಂತೆ ಎಟಿಸಿ ಸಿಸ್ಟಂ ಅಪಾಯದ ಸಂದೇಶವನ್ನು ರವಾನಿಸಿದೆ.

Advertisement

Advertisement

ಈ ವೇಳೆ ಎಚ್ಚೆತ್ತ ಎರಡೂ ವಿಮಾನಗಳು ಅಂತರವನ್ನು ದೂರ ಮಾಡಿಕೊಂಡು ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪುವಂತೆ ಮಾಡಿವೆ. 
ಹೈದರಾಬಾದ್ ನಿಂದ ಹೊರಟಿದ್ದ ವಿಮಾನ 36 ಸಾವಿರ ಅಡಿ ಎತ್ತರದಲ್ಲಿ, ಬೆಂಗಳೂರಿನಲ್ಲಿ ಹೊರಟಿದ್ದ ವಿಮಾನ 28 ಸಾವಿರ ಅಡಿ ಎತ್ತರದಲ್ಲಿ ಹಾರಾಡಲಿ ಎಂದು ಎಟಿಸಿ ಅವಕಾಶ ನೀಡಿತ್ತು. ಆದರೆ, ಎರಡೂ ವಿಮಾನಗಳು ಕ್ರಮೇ 27300 ಅಡಿ ಎತ್ತರಕ್ಕೆ ಇಳಿದಿದ್ದರಿಂದ ಕೇವಲ 200 ಮೀಟರ್ ಅಂತರದಲ್ಲಿ ಹಾರಾಟ ನಡೆಸಿದ್ದರಿಂದ ಅಪಾಯ ಎದುರಾಗಿತ್ತು ಎಂದು ತಿಳಿದುಬಂದಿದೆ. 
ಈ ಕುರಿತು ಏರ್ ಟ್ರಾಫಿಕ್ ಕಂಟ್ರೋಲ್ ಸ್ಪಷ್ಟನೆ ನೀಡಿದ್ದು, ಹೈದರಾಬಾದ್-ಕೊಯಿಮತ್ತೂರ್ ಮತ್ತು ಬೆಂಗಳೂರು-ಕೊಚ್ಚಿ ವಿಮಾನಗಳು ಪರಸ್ಪರ ಎದುರಾಗುತ್ತಿತ್ತು. ಈ ವೇಳೆ ಕೂಡಲೇ ಎಚ್ಚೆತ್ತುಕೊಂಡು ಸಂದೇಶ ರವಾನಿಸಲಾಗಿತ್ತು ಎಂದು ತಿಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments