ನವದೆಹಲಿ: ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಕುರಿತು ಮಾಹಿತಿ ನೀಡುವ ಮ್ಯೂಸಿಯಂ ನ್ನು ತೀನ್ ಮೂರ್ತಿ ಭವನದಲ್ಲಿ ಕಾಂಪ್ಲೆಕ್ಸ್ ನಲ್ಲಿ ನಿರ್ಮಿಸಲಾಗುತ್ತದೆ ಎಂದು ನೆಹರು ಮೆಮೊರಿಯಲ್ ಮ್ಯೂಸಿಯಂ ಹಾಗೂ ಗ್ರಂಥಾಲಯದ ನಿರ್ದೇಶಕ ಶಕ್ತಿ ಸಿನ್ಹಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಎನ್ಎಂಎಂಎಲ್ ನ 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸುಮಾರು 25 ಎಕರೆ ಎಸ್ಟೇಟ್ ಪ್ರದೇಶದಲ್ಲಿ ಭಾರತದ ಎಲ್ಲಾ ಪ್ರಧಾನಿಗಳ ಮ್ಯೂಸಿಯಂ ನ್ನು ನಿರ್ಮಿಸಲಾಗುತ್ತದೆ. ಇದು ಈಗಿರುವ ನೆಹರು ಮೆಮೊರಿಯಲ್ ಗಿಂತ ಪ್ರತ್ಯೇಕವಾಗಿರಲಿದೆ ಎಂದು ಸಭೆಯ ನಂತರ ಮಾತನಾಡಿರುವ ಸಿನ್ಹಾ ಹೇಳಿದ್ದಾರೆ.
ತೀನ್ ಮೂರ್ತಿ ಭವನದಲ್ಲಿ ದೇಶದ ಮೊದಲ ಪ್ರಧಾನಿಯ ನೆನಪಿಗಾಗಿ ನೆಹರು ಮೆಮೊರಿಯಲ್ ಮ್ಯೂಸಿಯಂ ನ್ನು ಸ್ಥಾಪಿಸಲಾಗಿತ್ತು.