ದೇಶ

10 ವರ್ಷ ಹಳೆಯ ಭೂ ಹಗರಣ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಖುಲಾಸೆ

Raghavendra Adiga
ಚಂಡೀಘರ್: ಹತ್ತು ವರ್ಷದ  ಹಿಂದಿನ  ಅಮೃತಸರ ಇಂಪ್ರೂವ್ಮೆಂ ಟ್ ಟ್ರಸ್ಟ್ ಭೂ ಹಗರಣ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಮೊಹಾಲಿ ವಿಶೇಷ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
ಪ್ರಕರಣದಲ್ಲಿ ತಪ್ಪಿತಸ್ಥರೆಂದು ಗುರುತಿಸಲ್ಪಟ್ಟಿದ್ದ ಪಂಜಾಬ್ ಮುಖ್ಯಮಂತ್ರಿ ಹಾಗೂ ಇತರೆ ಹದಿನೇಳು ಮಂದಿಯನ್ನು ಖುಲಾಸೆ ಗೊಳಿಸಿ  ಮೊಹಾಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧಿಶ  ಜಸ್ವಿಂದರ್ ಸಿಂಗ್ ಆದೇಶ ನಿಡಿದ್ದಾರೆ. ಪಂಜಾಬ್ ವಿಜಿಲೆನ್ಸ್ ಬ್ಯೂರೊ ಸಲ್ಲಿಸಿದ ವರದಿಯನ್ನು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.
 "ಎರಡನೇ ತನಿಖೆ ವರದಿ ಏನಿದೆಯೋ ಅದು ಸರಿಯಾಗಿದೆ.ನ್ಯಾಯಾಲಯವು ಪ್ರಕರಣವನ್ನು ರದ್ದುಪಡಿಸುವ ವರದಿಯನ್ನು ಮಾನ್ಯ ಮಾಡುತ್ತದೆ" ನ್ಯಾಯಾಧೀಶರು ಹೇಳಿದ್ದಾರೆ.
2008 ರ ಸೆಪ್ಟೆಂಬರ್ ನಲ್ಲಿ ಪಂಜಾಬ್ ವಿಜಿಲೆನ್ಸ್ ಬ್ಯೂರೊ ಈ ಪ್ರಕರಣವನ್ನು ದಾಖಲಿಸಿತ್ತು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಇತರರ ಮೇಲೆ ವಂಚನೆ, ವಂಚನೆ ಉದ್ದೇಶಕ್ಕಾಗಿ ನಕಲಿ, ದಾಖಲೆ ಸೃಷ್ಟಿ, ಕ್ರಿಮಿನಲ್ ಪಿತೂರಿ ದೂರನ್ನು ದಾಖಲಿಸಿಅಲಾಗಿತ್ತು. ಅಮೃತಸರ್ ಇಂಪ್ರೂವ್ಮೆಂಟ್ ಟ್ರಸ್ಟ್ (ಎಐಟಿ) ಗೆ ಸೇರಿದ್ದ 32.1 ಎಕರೆ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ನಿಡಿರುವುದರ ಕುರಿತಂತೆ ತನಿಖೆ ಆಗಬೇಕೆಂದು ಅಂದು ಪಂಜಾಬ್ ವಿಧಾನಸಭೆ ತಿರ್ಮಾನ ತೆಗೆದುಕೊಂಡಿತ್ತು.
SCROLL FOR NEXT