ಅಂಬ್ಯುಲೆನ್ಸ್ ಸೇವೆಗಾಗಿ ಗರ್ಭಿಣಿಯನ್ನು 12 ಕಿಮೀ ಭುಜದ ಮೇಲೆ ಹೊತ್ತೊಯ್ದ ಪತಿ
ವಿಜಯನಗರ(ಆಂಧ್ರ ಪ್ರದೇಶ): ಅಂಬ್ಯುಲೆನ್ಸ್ ಸೇವೆ ದೊರಕದ ಕಾರಣ ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ 12 ಕಿಲೋಮೀಟರುಗಳಷ್ಟು ದೂರ ಭುಜದ ಮೇಲೆ ಹೊತ್ತು ನಡೆದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಗೆ ಸೇರಿದ್ದ ಬುಡಕಟ್ಟು ಮಹಿಳೆಯೊಬ್ಬರು ಅಕಾಲಿಕ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಆದರೆ ರಸ್ತೆ ಸಂಪರ್ಕವೇ ಇಲ್ಲದ ಗ್ರಾಮಕ್ಕೆ ಅಂಬ್ಯುಲೆನ್ಸ್ ಬರುವಂತಿರಲಿಲ್ಲ. ಆಗ ಆಕೆಯ ಪತಿಯೇ ಸೀರೆಯಿಂದ ಮರೆಮಾಡಿದ ಆಕೆಯನ್ನು ಬಿದಿರ ಬುಟ್ಟಿಯಲ್ಲಿ ಕೂರಿಸಿ ಅದಕ್ಕೆ ನಾಲ್ಕು ಕಡೆ ಹಗ್ಗ ಕಟ್ಟಿದ್ದು ಹಗ್ಗವನ್ನು ಬಿದಿರ ಬೊಂಬಿಗೆ ಕಟ್ಟಿಕೊಂಡು ಇಬ್ಬರು ಹೊತ್ತೊಯ್ದಿದಾರೆ.
ಅರಣ್ಯ ಪ್ರದೇಶವಾದ ಗ್ರಾಮದ ಬುಡಕಟ್ಟು ಮಹಿಳೆ ಜಿದಮ್ಮ ಎಂಟು ತಿಂಗಳ ಗರ್ಭಿಣಿಯಾಗಿದ್ದು ಭಾನುವಾರ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ರಸ್ತೆ ಮಾರ್ಗವಿಲ್ಲದ ಕಾರಣ ಭುಜದ ಮೇಲೆ ಹೊತ್ತು ಸಾಗಿಸುವ ಮೂಲಕ ಸಾಲೂರು ಮಂಡಲದ ದುಗ್ಗೇರು ಆಸ್ಪತ್ರೆಗೆ ಸಾಗಿಸಲಾಗಿತ್ತು.ಅಲ್ಲಿನ ವೈದ್ಯರು ಆಕೆಯನ್ನು ಅಂಬ್ಯುಲೆನ್ಸ್ ಮೂಲಕ ಅರವತಿಪುರಂ ಗೆ ಸಾಗಿಸಿದ್ದರು ಆದರೆ ಅಷ್ಟರಲ್ಲಿ ಸಮಯ ಮೀರಿದ ಕಾರಣ ಹೊಟ್ಟೆಯಲ್ಲಿದ್ದ ನವಜಾತ ಶಿಶು ಸಾವನ್ನಪ್ಪಿದೆ.
ವಿಜಯನಗರ ಜಿಲ್ಲೆಯಲ್ಲಿ ಇದು ಮೊದಲ ಘಟನೆ ಏನಲ್ಲ, ಇದಕ್ಕೂ ಮುನ್ನ ಇಂತಹಾ ಘಟನೆಗಳು ಸಾಕಷ್ಟು ನಡೆದಿದ್ದು ನಟ ಹಾಗೂ ಜನ ಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಸಹ ಇದರ ಸಂಬಂಧ ಪ್ರಸ್ತಾಪ ಮಾಡಿದ್ದಾರೆ. ಬುಡಕಟ್ಟು ಜನರೇ ಪ್ರಧಾನವಾಗಿರುವ ಇಲ್ಲಿನ ಹಕವು ಹಳ್ಳಿಗಳಿಗೆ ರಸ್ತೆ ಸಂಪರ್ಕ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ.
ಇನ್ನು ಮಾಜಿ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಸೇರಿ ಹಿರಿಯ ಟಿಡಿಪಿ ಮುಖಂಡರು ಇದೇ ವಿಜಯನಗರಂ ಜಿಲ್ಲೆಯ ಸಂಸದರಾಗಿದ್ದಾರೆ. ಬುಡಕಟ್ಟು ಜನ ಪ್ರಾಬಲ್ಯವಿರುವ ಜಿಲ್ಲೆಯ ಪಾರ್ವತಿಪುರಂ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿ ಜಯ ಗಳಿಸಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos