ಸಂಗ್ರಹ ಚಿತ್ರ 
ದೇಶ

ಇನ್ಮುಂದೆ ಪ್ರಧಾನಿ ಮೋದಿ ಬಳಿ ತೆರಳುವಾಗ ಸಚಿವ, ಶಾಸಕರಿಗೂ ಭದ್ರತಾ ಚೆಕ್ ಕಡ್ಡಾಯ!

ಪ್ರಧಾನಿ ನರೇಂದ್ರ ಮೋದಿಗೆ ಉಗ್ರ ಸಂಘಟನೆಗಳು ಹಾಗೂ ಮಾವೋವಾದಿಗಳಿಂದ ಗಂಭೀರ ಜೀವ ಬೆದರಿಕೆ ಇರುವುದರಿಂದ ಪ್ರಧಾನಿ ಭದ್ರತಾ ನಿಯಮಗಳಲ್ಲಿ ಕೇಂದ್ರ ಗೃಹಸಚಿವಾಲಯ ಪ್ರಮುಖ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಉಗ್ರ ಸಂಘಟನೆಗಳು ಹಾಗೂ ಮಾವೋವಾದಿಗಳಿಂದ ಗಂಭೀರ ಜೀವ ಬೆದರಿಕೆ ಇರುವುದರಿಂದ ಪ್ರಧಾನಿ ಭದ್ರತಾ ನಿಯಮಗಳಲ್ಲಿ ಕೇಂದ್ರ ಗೃಹಸಚಿವಾಲಯ ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿರುವ ಗೃಹ ಸಚಿವಾಲಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವಬೆದರಿಕೆ ಇರುವುದು ಸತ್ಯ. ಈ ಕಾರಣಕ್ಕೆ ಅವರಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದೆ. ಭದ್ರತಾ ದೃಷ್ಟಿಯಿಂದ ಹೊಸ ನಿಯಮವೊಂದನ್ನು ಜಾರಿಮಾಡಲಾಗಿದ್ದು, ಈ ನಿಯಮದ ಪ್ರಕಾರ ಪ್ರಧಾನಿಯವರ ಸಮೀಪ ಸಾಮಾನ್ಯರು ಯಾರೂ ಬರುವಂತಿಲ್ಲ. ಅಷ್ಟೇ ಏಕೆ ಸಚಿವರು, ಅಧಿಕಾರಿಗಳು ಕೂಡ ಮೋದಿಯವರ ವಿಶೇಷ ರಕ್ಷಣಾ ತಂಡ ತಪಾಸಣೆ ನಡೆಸಿ ಒಪ್ಪಿಗೆ ನೀಡಿದ ನಂತರವೇ ಅವರನ್ನು ಭೇಟಿ ಮಾಡಬೇಕು ಎಂದು ತಿಳಿಸಿದೆ.
ಅಂತೆಯೇ ಈ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳಿಗೂ ಎಚ್ಚರಿಕೆ ನೀಡಲಾಗಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮಕ್ಕೆ ಭಾರಿ ಭದ್ರತೆ ಒದಗಿಸುವಂತೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಎಲ್ಲ ರಾಜ್ಯಗಳಿಗೂ ಲಿಖಿತವಾಗಿ ಸಂದೇಶ ಕಳಿಸಲಾಗಿದ್ದು, ಯಾರೇ ಆಗಿರಲಿ ಪ್ರಧಾನಿ ನಿಕಟ ಸಂಪರ್ಕಕ್ಕೆ ಹೋಗುವಂತಿಲ್ಲ. ಈ ಆದೇಶ ಪಾಲನೆಯಾಗಲೇ ಬೇಕು ಎಂದು ಖಡಕ್​ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ ಮೋದಿಯವರಿಗೂ ರೋಡ್​ ಶೋ ನಡೆಸದೆ ಇರಲು ಸಲಹೆ ನೀಡಲಾಗಿದೆ.
ಮುಂಬರುವ ದಿನಗಳಲ್ಲಿ ಮೋದಿಯವರು ಛತ್ತೀಸ್​ಗಡ್​, ಜಾರ್ಖಂಡ್​, ಮಧ್ಯಪ್ರದೇಶ, ಓಡಿಶಾ, ಪಶ್ಚಿಮಬಂಗಾಳ, ಪಂಜಾಬ್​ ವಿಧಾನಸಭಾ ಚುನಾವಣಾ ನಿಮಿತ್ತ ಪ್ರಧಾನಿ ಮೋದಿ ಪ್ರವಾಸ ಮಾಡಲಿದ್ದು ಇದಕ್ಕಾಗಿ ಬಿಗಿಭದ್ರತೆ ನೀಡಲು ಸಿದ್ಧತೆ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ