ಬಾಲಕ-ಭಾರತೀಯ ಸೇನೆ 
ದೇಶ

ಗಡಿದಾಟಿ ಒಳ ಬಂದ ಪಿಒಕೆ ಬಾಲಕನಿಗೆ ಸಿಹಿ ತಿನಿಸು, ಬಟ್ಟೆ ಕೊಟ್ಟು ವಾಪಸ್ ಕಳುಹಿಸಿದ ಭಾರತೀಯ ಯೋಧರು!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 11 ವರ್ಷದ ಬಾಲಕ ಆಕಸ್ಮಿಕವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದು ಇದನ್ನು ಗಮನಿಸಿದ ಭಾರತೀಯ ಯೋಧರು ಬಾಲಕನಿಗೆ ಸಿಹಿ ತಿನಿಸು ಮತ್ತು...

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 11 ವರ್ಷದ ಬಾಲಕ ಆಕಸ್ಮಿಕವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದು ಇದನ್ನು ಗಮನಿಸಿದ ಭಾರತೀಯ ಯೋಧರು ಬಾಲಕನಿಗೆ ಸಿಹಿ ತಿನಿಸು ಮತ್ತು ಬಟ್ಟೆಗಳನ್ನು ಕೊಟ್ಟ ಪಾಕಿಸ್ತಾನ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. 
ಪೂಂಚ್ ಜಿಲ್ಲೆಯ ಚಾಕನ್ ದ ಬಾಗ್ ಕ್ರಾಸ್ಸಿಂಗ್ ಪಾಯಿಂಟ್ ನಲ್ಲಿ ಬಾಲಕನನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು ಬಾಲಕನನ್ನು ಮೊಹಮ್ಮದ್ ಅಬ್ದುಲ್ಲಾ ಎಂದು ತಿಳಿದುಬಂದಿದೆ. 
ಜೂನ್ 24ರಂದು ಭಾರತೀಯ ಯೋಧರು ಬಾಲಕನನ್ನು ವಶಕ್ಕೆ ಪಡೆದು ನಂತರ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಾಲಕನ ವಾಪಸಾತಿಗಾಗಿ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡು ನಂತರ ಆತನನ್ನ ವಾಪಸ್ ಕಳುಹಿಸಿಕೊಡಲಾಯಿತು. 
ಮಾನವೀಯತೆ ಆಧಾರದ ಮೇಲೆ ಬಾಲಕನನ್ನು ವಾಪಸ್ ಕಳುಹಿಸಿಕೊಡಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ ಸಿಎಂ ಪತ್ನಿ ವಿರುದ್ಧ ಆರೋಪ: ಪವನ್ ಖೇರಾಗೆ ನಿರೀಕ್ಷಣಾ ಜಾಮೀನು ಮಂಜೂರು

ರಾಹುಲ್- ಸೋನಿಯಾ ಗಾಂಧಿ ಏನೇ ಹೇಳಿದ್ರು ಪ್ರಸಾದವೆಂದು ಸ್ವೀಕಾರ: ಕೇಂದ್ರ ಜನಸಾಮಾನ್ಯರ ನೋವು ಅರಿಯಬೇಕು; ಡಿ.ಕೆ. ಶಿವಕುಮಾರ್

ನರ್ಮದಾ ನದಿಯಲ್ಲಿ ಪ್ರವಾಸಿ ಬೋಟ್ ಜಲಸಮಾಧಿ: ಸಾವಿನ ಸಂಖ್ಯೆ 9ಕ್ಕೆ ಏರಿಕೆ; ಎದೆಗೆ ಅಪ್ಪಿಕೊಂಡ ಸ್ಥಿತಿಯಲ್ಲಿ ತಾಯಿ-ಮಗು ಶವಪತ್ತೆ

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

SCROLL FOR NEXT