ಸಂಗ್ರಹ ಚಿತ್ರ 
ದೇಶ

ದ್ವೇಷದ ಪ್ರಕರಣ ಅಲ್ಲ, ಸಂವಿಧಾನಕ ತನಿಖೆ ನಡೆಯುತ್ತಿದೆ: ಸಿಬಿಐ

ಕಾರ್ತಿ ಚಿದಂಬರಂ ಬಂಧನ ದ್ವೇಷದ ಪ್ರಕರಣ ಅಲ್ಲ..ಬದಲಿಗೆ ಸಂವಿಧಾನ ಪ್ರಕಾರವೇ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.

ನವದೆಹಲಿ: ಕಾರ್ತಿ ಚಿದಂಬರಂ ಬಂಧನ ದ್ವೇಷದ ಪ್ರಕರಣ ಅಲ್ಲ..ಬದಲಿಗೆ ಸಂವಿಧಾನ ಪ್ರಕಾರವೇ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.
ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬುಧವಾರ ಚೆನ್ನೈಯಲ್ಲಿ ಬಂಧಿಸಿತ್ತು. ಅವರನ್ನು ಒಂದು ದಿನದ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿತ್ತು. ವಿಶೇಷ ನ್ಯಾಯಾಧೀಶ ಸುನಿಲ್‌ ರಾಣಾ ಅವರ ಮುಂದೆ ಗುರುವಾರ ಅವರನ್ನು ಹಾಜರುಪಡಿಸಲಾಯಿತು. ಈ ವೇಳೆ ಕಾರ್ತಿಯನ್ನು ನ್ಯಾಯಾಧೀಶರು ಐದು ದಿನಗಳ ಕಸ್ಟಡಿಗೆ ಒಪ್ಪಿಸಿದರು.
ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ಕಾರ್ತಿ ವಿದೇಶಕ್ಕೆ ಹೋಗಿದ್ದಾಗ ಎಸಗಿದ ಕೃತ್ಯಗಳ ಆಘಾತಕಾರಿ ಸಾಕ್ಷ್ಯಗಳಿವೆ. ಹಣ ಸ್ವೀಕರಿಸಿದ ವಿದೇಶಿ ಬ್ಯಾಂಕ್‌ ಖಾತೆಗಳನ್ನು ಅವರು ಮುಚ್ಚಿದ್ದಾರೆ ಎಂದು ಸಿಬಿಐ ಆರೋಪಿಸಿತು. ಇದು ರಾಜಕೀಯ ದ್ವೇಷದ ಪ್ರಕರಣ ಅಲ್ಲ, ಸಂವಿಧಾನ ಪ್ರಕಾರವೇ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಪರವಾಗಿ  ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು. 
ಅಂತೆಯೇ ಬುಧವಾರ ಬಂಧನಕ್ಕೆ ಒಳಗಾದ ಬಳಿಕ ಯಾವುದೇ ಆರೋಗ್ಯ ತೊಂದರೆ ಇದೆ ಎಂದು ಕಾರ್ತಿ ಹೇಳಿರಲಿಲ್ಲ. ಹಾಗಿದ್ದರೂ ಸಫ್ದರ್‌ ಜಂಗ್‌ ಆಸ್ಪತ್ರೆಯ ವೈದ್ಯರು ಅವರನ್ನು ಬುಧವಾರ ರಾತ್ರಿ ಹೃದ್ರೋಗ ಆರೈಕೆ ಕೇಂದ್ರಕ್ಕೆ ಕಳುಹಿಸಿದ್ದರು. ಗುರುವಾರ ಬೆಳಿಗ್ಗೆ ಅವರನ್ನು ಸಿಬಿಐ ಕಚೇರಿಗೆ ಕರೆತರಲಾಯಿತು. ಬುಧವಾರ ಸಂಜೆ 7.30ಕ್ಕೆ ಕಾರ್ತಿಯನ್ನು ಸಿಬಿಐ ವಶಕ್ಕೆ ಕೊಡಲಾಗಿತ್ತು. ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ತನಿಖೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಮೆಹ್ತಾ ತಿಳಿಸಿದರು.
ಬಳಿಕ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ನೇತೃತ್ವದ ವಕೀಲರ ತಂಡ ಕಾರ್ತಿ ಪರವಾಗಿ ವಾದಿಸಿತು. 2017ರ ಮೇಯಲ್ಲಿ ಕಾರ್ತಿ ಅವರನ್ನು ಸಿಬಿಐ ಸುಮಾರು 22 ತಾಸುವಿಚಾರಣೆಗೆ ಒಳಪಡಿಸಿದೆ. 2017ರ ಆಗಸ್ಟ್‌ ಬಳಿಕ ಈವರೆಗೆ ಅವರಿಗೆ ಯಾವುದೇ ನೋಟಿಸ್‌ ನೀಡಿಲ್ಲ. ಕಾರ್ತಿ ಅವರಲ್ಲಿ ಏನನ್ನೂ ಕೇಳುವುದಕ್ಕೆ ಇಲ್ಲ ಎಂಬುದೇ ಇದರ ಅರ್ಥ ಎಂದು ಸಿಂಘ್ವಿ ಹೇಳಿದರು.
‘ಸಹಕಾರ ನೀಡುತ್ತಿಲ್ಲ ಎಂಬುದನ್ನು ಸಾಬೀತು ಮಾಡುವ ಏಕೈಕ ವಿಧಾನ ಎಂದರೆ ನೋಟಿಸ್‌ ಕೊಟ್ಟು ನೋಡುವುದು. ಆದರೆ ನೋಟಿಸನ್ನೇ ನೀಡದೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಆರು ತಿಂಗಳ ಬಳಿಕ ಬಂಧಿಸಲಾಗಿದೆ. ಇದು ವಿಚಿತ್ರ. ವಿಮಾನದಿಂದ ಹೊರಗೆ ಬರುತ್ತಿದ್ದಂತೆಯೇ ಅವರನ್ನು ಬಂದಿಸಲಾಗಿದೆ. ಕಾರ್ತಿ ವಿರುದ್ಧ ಅಣುವಿನಷ್ಟೂ ಪುರಾವೆ ಇಲ್ಲ. ನ್ಯಾಯಾಲಯದ ಎಲ್ಲ ಆದೇಶಗಳನ್ನು ಪಾಲಿಸಿದ್ದರೂ ಬಂಧಿಸಲಾಗಿದೆ’ ಎಂದು ಸಿಂಘ್ವಿ ವಾದಿಸಿದರು.
ವಿಚಾರಣೆ ಸಂದರ್ಭದಲ್ಲಿ ಕಾರ್ತಿ ತಂದೆ ಚಿದಂಬರಂ ಮತ್ತು ಅವರ ಹೆಂಡತಿ ನಳಿನಿ ಇದ್ದರು. ಈ ಇಬ್ಬರೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ