ಸಂಗ್ರಹ ಚಿತ್ರ 
ದೇಶ

ಅಮೆರಿಕದಿಂದ 13,500 ಕೋಟಿ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಮುಂದು!

ಭಾರತೀಯ ಸೇನಾ ಬಲವರ್ಧನೆ ಮತ್ತು ಸೇನೆ ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಭಾರತೀಯ ಸೇನಾ ಬಲವರ್ಧನೆ ಮತ್ತು ಸೇನೆ ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ರಷ್ಯಾ ಜೊತೆ ಎಸ್‌-400 ಟ್ರಯಂಫ್ ಕ್ಷಿಪಣಿ ಖರೀದಿಯ ಬೆನ್ನಲ್ಲೇ ಭಾರದ ವಿರುದ್ಧ ಅಮೆರಿಕ ಮುನಿಸಿಕೊಂಡು ನಿರ್ಬಂಧ ಹೇರುವ ಮಾತನಾಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತ ಸರ್ಕಾರ ಅಮೆರಿಕವನ್ನು ಸಂತೈಸುವ ಪ್ರಯತ್ನ ಮಾಡಿದ್ದು, ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ. 
ಅಮೆರಿಕದ ಸಿಕೋಸ್ಕಿ ಲಾಕ್ ಹೀಡ್ ಮಾರ್ಟಿನ್ ನಿರ್ಮಾಣದ ಬಹುಪಯೋಗಿ ಎಂಎಚ್‌-60 ರೋಮಿಯೋ ಹೆಲಿಕಾಪ್ಟರ್ ಗಳನ್ನು ಭಾರತ ಖರೀದಿಸಲು ಮುಂದಾಗಿದ್ದು, ಈ ಚಾಪರ್ ಗಳು ಟಾರ್ಪೆಡೋ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿವೆ.  ಅಂತೆಯೇ ಆಗಸದಿಂದಲೇ ಶತೃಪಾಳಯದ ಜಲಾಂತರ್ಗಾಮಿ ನೌಕೆಗಳನ್ನು ಕಂಡು ಹಿಡಿದು ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. 
ಈ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿರುವ ಭಾರತ, ಅವುಗಳನ್ನು 2020-2024ರೊಳಗಾಗಿ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಲಿದೆ ಎನ್ನಲಾಗಿದೆ. ಈಗಾಗಲೇ ಸಾಗರದಲ್ಲಿ ಚೀನಾದ ಜಲಾಂತರ್ಗಾಮಿ ನೌಕೆಗಳು ನಿರಂತರ ಕಣ್ಗಾವಲು ಇರಿಸಿದ್ದು, ದೇಶದ ಜಲಪರಿಧಿಯನ್ನೂ ಪ್ರವೇಶಿಸಲು ಯತ್ನಿಸುತ್ತವೆ. ಹೀಗಾಗಿ ಚೀನಾದ ಹಾರಾಟಕ್ಕೆ ಮಿತಿ ಹಾಕಲು ಮತ್ತು ದೇಶದ ಸಾಗರ ರಕ್ಷಣೆ, ನೌಕಾಪಡೆಯ ಬಲವರ್ಧನೆಗೆ ಎಂಎಚ್‌-60 ಬಹುಪಯೋಗಿ ಹೆಲಿಕಾಪ್ಟರ್‌ ನ ಅವಶ್ಯಕತೆಯಿದ್ದು, ಅಮೆರಿಕದೊಂದಿಗೆ ಸರ್ಕಾರ ಶೀಘ್ರ ಒಪ್ಪಂದ ಅಂತಿಮಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video