ದೇಶ

ನೌಕಾದಳ ಮುಖ್ಯಸ್ಥರ ನೇಮಕ ಪ್ರಶ್ನಿಸಿ ನ್ಯಾಯಮಂಡಳಿಗೆ ವೈಸ್ ಅಡ್ಮಿರಲ್ ವರ್ಮಾ ಅರ್ಜಿ

Lingaraj Badiger
ನವದೆಹಲಿ: ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರ ನೇಮಕ ವಿರೋಧಿಸಿ ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಿ ನೌಕಾಪಡೆಯ ಮುಖ್ಯಸ್ಥರಾಗಿ ಕರಮ್‌ಬೀರ್‌ ಸಿಂಗ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ವರ್ಮಾ ಅವರು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.
ನೌಕಾಪಡೆಯ ಮುಖ್ಯಸ್ಥ ಅಡ್ವಿರಲ್ ಸುನೀಲ್ ಲಾಂಬಾ ಅವರು ಮೇ 31ಕ್ಕೆ ನಿವೃತ್ತರಾಗುತ್ತಿದ್ದು, 24ನೇ ನೌಕಾಪಡೆ ಮುಖ್ಯಸ್ಥರಾಗಿ ಕರಮ್ ಬೀರ್ ಸಿಂಗ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಆದರೆ ಸೇವಾ ಹಿರಿತನದ ಆಧಾರದ ಮೇಲೆ ವರ್ಮಾ ಅವರು ನೌಕಾಪಡೆಯ ಉನ್ನತ ಹುದ್ದೆ ಅಲಂಕರಿಸಬೇಕಿತ್ತು. ತಮ್ಮ ಸೇವಾ ಹಿರಿತನ ಪರಿಗಣಿಸದೆಯೇ ಸರ್ಕಾರ ಮಾಡಿರುವ ನೇಮಕವನ್ನು ವರ್ಮಾ ಅವರನ್ನು ನ್ಯಾಯಾಮಂಡಳಿಯಲ್ಲಿ ಪ್ರಶ್ನಿಸಿದ್ದಾರೆ.
SCROLL FOR NEXT