ದೇಶ

ಇದು ಸುಳ್ಳು ಸುದ್ದಿ! ಮಾಜಿ ಯೋಧರು ರಾಷ್ಟ್ರಪತಿಗೆ ಯಾವ ಪತ್ರ ಬರೆದಿಲ್ಲ: ರಾಷ್ಟ್ರಪತಿ ಭವನ ಸ್ಪಷ್ಟನೆ

Raghavendra Adiga
ನವದೆಹಲಿ: ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಲುತ್ತಿದ್ದಾರೆ ಎಂದು ರಾಷ್ಟ್ರಪತಿಗೆ ಮಾಜಿ ಸೈನಿಕರು ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ ಎಂಬ ಸುದ್ದಿ ಸುಳ್ಳು, ಅಂತಹಾ ಯಾವುದೇ ಪತ್ರ ರಾಷ್ಟ್ರಪತಿಗಳಿಗೆ ತಲುಪಿಲ್ಲ ಎಂದು ರಾಷ್ಟರಪತಿ ಭವನ ಸ್ಪಷ್ಟನೆ ನಿಡಿದೆ.
ಸಶಸ್ತ್ರ ಪಡೆಯ ಎಂಟು ಮಾಜಿ ಮುಖ್ಯಸ್ಥರು ಹಾಗೂ ಇತರೆ 148 ಮಿಲಿಟರಿ ಪರಿಣತರು ಶಸ್ತ್ರಪಡೆಗಳ ಸಾಹಸವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಈ ಸಂಬಂಧ ಕ್ರಮ ಕೈಗೊಳ್ಲಬೇಕೆಂದುರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.
ಆದರೆ ಈ ಸುದ್ದಿ ಸುಳ್ಳು ಎಂದು ರಾಷ್ಟ್ರಪತಿ ಭವನ ಹೇಳಿದೆ. ಅಲ್ಲದೆ ಪತ್ರದಲ್ಲಿ ನಿವೃತ್ತ ಜನರಲ್ ಎಸ್‌.ಎಫ್‌.ರೊಡ್ರಿಗಸ್‌ ಸಹಿ ಇರುವುದಾಗಿಯೂ ಹೇಳಲಾಗಿತ್ತು. ಆದರೆ ತಾವು ಅಂತಹಾ ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ , ಇದು ಸುಳ್ಳು ಎಂದು ರೊಡ್ರಿಗಸ್‌ರವರ ಸ್ವತಃಅ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಪತ್ರಕ್ಕೆ ಸಹಿ ಹಾಕಿದ್ದ ಬಗ್ಗೆ ಏರ್ ಚೀಫ್ ಮಾರ್ಷಲ್ ಎನ್.ಸಿ.ಸೂರಿ ಮಾತನಾಡಿ ಇದು ಅಡ್ಮಿರಲ್ ರಾಮ್ ದಾಸ್ ಅವರ ಪತ್ರವಲ್ಲ, ಇದನ್ನು ಮೇಜರ್ ಚೌಧರಿ  ಎಂಬ ಇನ್ನಾರೋ ಬರೆದಿದ್ದಾರೆ.ಇದು ನನ್ನ ಗಮನಕ್ಕೆ ಬಂದಂತೆ ಸತ್ಯವಾಗಿಯೂ ಬರೆದಿದ್ದಲ್ಲ, ಸಶಸ್ತ್ರ ಪಡೆಗಳು ರಾಜಕೀಯವಾಗಿ ಚುನಾಯಿತ ಸರ್ಕಾರಕ್ಕೆ ಬೆಂಬಲ ನೀಡುತ್ತಿವೆ ಎಂದು ನಾನು ಬರೆದಿದ್ದೇನೆ ಎನ್ನಲಾಗುತ್ತಿದ್ದು ಇದು ಸುಳ್ಳು,  ಅಂತಹ ಯಾವುದೇ ಪತ್ರಕ್ಕೆ ನನ್ನ ಒಪ್ಪಿಗೆಯನ್ನು ತೆಗೆದುಕೊಂಡಿಲ್ಲ.ಆ ಪತ್ರದಲ್ಲಿ ಬರೆಯಲ್ಪಟ್ಟಿದ್ದರೂ ನಾನು ಒಪ್ಪಿಕೊಳ್ಳುವುದಿಲ್ಲ. . ರಾಮ್ ದಾಸ್ ಹೇಳಿದ್ದಾರೆ.
SCROLL FOR NEXT