ಸಂಗ್ರಹ ಚಿತ್ರ 
ದೇಶ

ರಾಹುಲ್‍ ಗಾಂಧಿ ವಿಶ್ವದ ಅತ್ಯುತ್ತಮ ಸಹೋದರ: ರಕ್ಷಾ ಬಂಧನಕ್ಕೆ ಪ್ರಿಯಾಂಕಾ ವಾದ್ರಾ ವಿಶೇಷ ಉಡುಗೊರೆ

ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ತಮ್ಮ ಸಹೋದರ ರಾಹುಲ್ ಗಾಂಧಿ ಅವರನ್ನು 'ವಿಶ್ವದ ಅತ್ಯುತ್ತಮ ಸಹೋದರ' ಎಂದು ಬಣ್ಣಿಸಿದ್ದಾರೆ.

ನವದೆಹಲಿ: ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ತಮ್ಮ ಸಹೋದರ ರಾಹುಲ್ ಗಾಂಧಿ ಅವರನ್ನು 'ವಿಶ್ವದ ಅತ್ಯುತ್ತಮ ಸಹೋದರ' ಎಂದು ಬಣ್ಣಿಸಿದ್ದಾರೆ.

ಪ್ರಿಯಾಂಕಾ ತಮ್ಮ ಹಾಗೂ ರಾಹುಲ್ ಅವರ ಬಾಲ್ಯದ ಕೆಲ ಅಪರೂಪದ ಚಿತ್ರಗಳನ್ನು ಹಂಚಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. 'ವರ್ಷಗಳು ಕಳೆದರೂ ಸೋದರ-ಸೋದರಿ ಸಂಬಂಧ ಹಾಗೆಯೇ ಇದೆ. ಏನೂ ಬದಲಾಗಿಲ್ಲ ಎಂದು ನಾನು ಭಾವಿಸುತ್ತೇನೆ ! ರಾಹುಲ್‍ ತಮಗೆ ವಿಶ್ವದ ಅತ್ಯುತ್ತಮ ಸಹೋದರ' ಎಂದು ಪ್ರಿಯಾಂಕ ಪೋಸ್ಟ್ ಮಾಡಿದ್ದಾರೆ.

ರಕ್ಷಾಬಂಧನ ಹಬ್ಬವನ್ನು ಎಲ್ಲೆಡೆ ಇಂದು ಆಚರಿಸಲಾಗುತ್ತಿದೆ. ಸಹೋದರ-ಸಹೋದರಿಯರ ಬಾಂಧವ್ಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸಹೋದರಿಯರು ಅಣ್ಣನಿಗೆ ರಾಖಿ ಕಟ್ಟಿ ಸಮೃದ್ಧಿ, ಆರೋಗ್ಯದ ಶುಭಕೋರುತ್ತಾರೆ. ಹಾಗೆಯೇ ಸಹೋದರರೂ ಪರಸ್ಪರ ಶುಭ ಕೋರಿ ಸೋದರರಿಗೆ ಉಡುಗೊರೆ ನೀಡುತ್ತಾರೆ. ಈ ಬಾರಿ ಸ್ವಾತಂತ್ರ್ಯ ದಿನದಂದೇ ರಕ್ಷಾ ಬಂಧನ್‍ ಹಬ್ಬ ಆಚರಿಸುತ್ತಿರುವುದು ವಿಶೇಷವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

'ಭಾರತ ಕೂಡ ಸೋತಿದೆ' ಎಂದ PCB, ಮೊಹ್ಸಿನ್ ನಕ್ವಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ Iceland Cricket Board

ಹೊಲದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ: ಗದರಿದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದ ಯುವಕ!

ಬೋನ್ ಇಟ್ಟಿದ್ದು ಹೆಣ್ಣಿಗೆ, ಸೆರೆಯಾಗಿದ್ದು 'ಗಂಡು': ಅರಣ್ಯ ಇಲಾಖೆಗೇ ಶಾಕ್, ಚಿರತೆ ಸೆರೆ ಕಾರ್ಯಾಚರಣೆಗೆ ಭಾರಿ ಟ್ವಿಸ್ಟ್!