ಸಂಗ್ರಹ ಚಿತ್ರ 
ದೇಶ

100 ಪ್ರಮುಖ ಮಾರ್ಗಗಳಲ್ಲಿ ವಿಶ್ವ ದರ್ಜೆಯ ಖಾಸಗಿ ರೈಲುಗಳ ಸಂಚಾರ

ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾದ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ರೈಲ್ವೆ ಇಲಾಖೆ 100 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ರೈಲುಗಳನ್ನೂಒಡಿಸಲು ಮುಂದಾಗಿದೆ.

ನವದೆಹಲಿ: ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾದ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ರೈಲ್ವೆ ಇಲಾಖೆ 100 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ರೈಲುಗಳನ್ನೂಒಡಿಸಲು ಮುಂದಾಗಿದೆ.

ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರೈಲುಗಳು ಸಂಚಾರ ಮಾಡಲಿದ್ದು, ರೈಲ್ವೇಯಲ್ಲಿ 22,500 ಕೋಟಿ ರೂಪಾಯಿ ಹೂಡಿಕೆ ಆಹ್ವಾನಿಸುವ ಆಶಯ ಸಹ ಹೊಂದಲಾಗಿದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರ ನೇತೃತ್ವದಲ್ಲಿ ಸಭೆ ನಡೆದ ಬಳಿಕ ರೈಲ್ವೇ ಮಂಡಳಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ದೇಶದ ಹಲವು ಕಡೆ  ಖಾಸಗಿ ಹೂಡಿಕೆ ಆಹ್ವಾನಿಸಲು ನಿರ್ಧರಿಸಿದ್ದು  ಸದ್ಯ ಈ ಕುರಿತು ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ.

ಹೂಡಿಕೆಗಾಗಿ ಟ್ರಾವೆಲ್ಸ್ ಕಂಪೆನಿಗಳು, ಇತರ ಕಂಪೆನಿಗಳು, ಟೂರ್ ಆಪರೇಟರ್ಗಳನ್ನು ಆಹ್ವಾನಿಸಲಾಗುತ್ತಿದ್ದು, ಕನಿಷ್ಠ 12 ರೈಲುಗಳಿಗೆ,  ಗರಿಷ್ಠ 30 ರೈಲುಗಳಿಗೆ ಬಿಡ್ ಸಲ್ಲಿಸಹುದಾಗಿದೆ. ಸದ್ಯ ದೆಹಲಿ-ಲಕ್ನೋ ಮಧ್ಯೆ ಓಡಾಡುತ್ತಿರುವ ತೇಜಸ್ ಎಕ್ಸ್ ಪ್ರೆಸ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉತ್ತೇಜನಗೊಂಡ ರೈಲ್ವೇ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ರೈಲುಗಳನ್ನು ಓಡಿಸಲು ಗುತ್ತಿಗೆ ನೀಡಲು ಮುಂದಾಗಿದ್ದು, ರೈಲುಗಳ ಸಂಚಾರದಿಂದ ಬರುವ ಆದಾಯದಲ್ಲಿ ಕಂಪೆನಿಗಳು ರೈಲ್ವೆ ಇಲಾಖೆಗೆ ಆದಾಯದ ಪಾಲು  ಸಹ ಕೊಡಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT