ದೇಶ

ಪಟ್ಟಭದ್ರ ಹಿತಾಸಕ್ತಿಗಳು ಸಮಾಜ ಒಡೆಯುವುದಕ್ಕೆ ಅವಕಾಶ ನೀಡದಿರಿ: ಪ್ರಧಾನಿ ಮೋದಿ

Manjula VN

ನವದೆಹಲಿ: ಪೌರತ್ವ ಮಸೂದೆ ತಿದ್ದುಪಡಿ ವಿರೋಧಿಸಿ ದೇಶದ ವಿವಿಧೆಡೆ ನಡೆಯುತ್ತಿರುವ ಹಿಂಸಾಚಾರಗಳು ದುರಾದೃಷ್ಟಕರ ಹಾಗೂ ತೀವ್ರ ನೋವು ತರುವಂತಹದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪೌರತ್ವ ಮಸೂದೆ ಕುರಿತು ಹಿಂಸಾಚಾರ ನಡೆಯಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯತ್ನ ನಡೆಸುತ್ತಿವೆ. ಇಂತಹ ಶಕ್ತಿಗಳಿಗೆ ಸಮಾಜ ಒಡೆಯುವುದಕ್ಕೆ ಅವಕಾಶ ನೀಡದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಪೌರತ್ವ ಮಸೂದೆಯು ದೇಶದ ಯಾವುದೇ ಧರ್ಮದ, ಯಾವುದೇ ಪ್ರಜೆಯ ಮೇಲೆ ಪರಿಣಾಮ ಬೀರುವುದಿಲ್ಲ. ಶಾಂತಿ, ಏಕತೆ ಹಾಗೂ ಸೋದರತ್ವವನ್ನು ಕಾಯ್ದುಕೊಳ್ಳುವ ಸಮಯ ಇದಾಗಿದೆ. ಯಾವುದೇ ರೀತಿಯ ವದಂತಿ ಹಾಗೂ ಸುಳ್ಳು ಹರಡುವುದರಿಂದ ದೂರವಿರಿ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾವುದೇ ಭಾರತೀಯರೂ ಚಿಂತೆ ಪಡಬೇಕಿಲ್ಲ. ಭಾರತದಿಂದ ಹೊರಗೆ ವರ್ಷಗಳ ಕಾಲ ದೌರ್ಜನ್ಯಕ್ಕೆ ತುತ್ತಾದ, ಭಾರತ ಬಿಟ್ಟು ಬೇರೆಲ್ಲೂ ಹೋಗಲು ಆಗದ ಜನರಿಗಾಗಿ ಈ ಕಾಯ್ದೆ ರೂಪಿಸಲಾಗಿದೆ. ಸ್ವೀಕಾರ್ಹತೆ, ಸೌಹಾರ್ದತೆ, ದಯೆ ಹಾಗೂ ಸೋದರತ್ವ ಎಂಬ ಭಾರತದ ಶತಮಾನಗಳನ್ನು ಪುರಾತನ ಸಂಸ್ಕೃತಿಯನ್ನು ಈ ಕಾಯ್ದೆ ಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT