ದೇಶ

ಕರ್ತಾರ್‌ಪುರ್ ಕಾರಿಡಾರ್‌: ಪಾಕ್ ಗೆ ತೆರಳಲು ಕೇಂದ್ರದ ಅನುಮತಿ ಕೇಳಿದ ಸಿಧು

Lingaraj Badiger

ನವದೆಹಲಿ: ನವೆಂಬರ್ 9 ರಂದು ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್‌ಪುರ್ ಕಾರಿಡಾರ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು ಎಂದು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಪತ್ರ ಬರೆದಿರುವ ಸಿಧು, ನವೆಂಬರ್ 9ರಂದು ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ ಉದ್ಘಾಟನೆಗಾಗಿ ಪಾಕಿಸ್ತಾನ ನನಗೆ ಆಹ್ವಾನ ನೀಡಿದೆ. ನಾನು ಒಬ್ಬ ಸಿಖ್ ಆಗಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮತ್ತು ನಮ್ಮ ಮಹಾನ್ ಗುರು ಬಾಬಾ ನಾನಕ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಪಾಕ್ ಗೆ ತೆರಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪಾಕಿಸ್ತಾನದ ಆಹ್ವಾನವನ್ನು ಸ್ವೀಕರಿಸಿದ್ದ ಸಿಧು, ತಮಗೆ ಆಹ್ವಾನ ನೀಡಿರುವುದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಕೂಡ ಹೇಳಿದ್ದರು. ಮಾಜಿ ಕ್ರಿಕೆಟಿಗ ಈ ಹಿಂದೆ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು.

SCROLL FOR NEXT