ದೇಶ

ಮಥುರಾ:  ಕೃಷ್ಣ ಜನ್ಮಭೂಮಿ ಮಸೀದಿ ತೆರವಿನ ಮನವಿ ವಜಾ

Raghavendra Adiga

ಮಥುರಾ: ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ದೇವಲಾಯದ ಜಾಗದಲ್ಲೇ ಮಸೀದಿ ನಿರ್ಮಾಣವಾಗಿದೆ  ಎಂಬ ಕಾರಣಕ್ಕೆ ಹಿಂದೂ ಪವಿತ್ರ ಪಟ್ಟಣದ ಶಾಹಿ ಈದ್ಗಾ  ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉತ್ತರ ಪ್ರದೇಶದ ಮಥುರಾದ ಸಿವಿಲ್ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.

ಸಹಾಯಕ ಜಿಲ್ಲಾ ನ್ಯಾಯಾಧೀಶರಾದ ಛಾಯಾ ಶರ್ಮಾ ಈ ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.

ಪೂಜಾ ಸ್ಥಳಗಳು (ವಿಶೇಷ ನಿಬಂಧನೆಗಳು) ಕಾಯ್ದೆ 1991 ರ ಅಡಿಯಲ್ಲಿ ಪ್ರಕರಣವನ್ನು ಒಪ್ಪಿಕೊಳ್ಳುವ ಬಾರ್ ಅನ್ನು ಉಲ್ಲೇಖಿಸಿ ನ್ಯಾಯಾಲಯವು ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದೆ.

ಹಿಂದೂ ದೇವರಾದ ಕೃಷ್ಣನ ಪರ ಶ್ರೀಕೃಷ್ಣ ವಿರಾಜಮಾನ್ ಸಲ್ಲಿಸಿದ್ದ ಅರ್ಜಿಯಲ್ಲಿ ದೇವಾಲಯದ ಸ್ಥಳದಲ್ಲಿ ಅತಿಕ್ರಮವಾಗಿ ಕಟ್ಟಿದ್ದ ಮಸೀದಿಯನ್ನು ತೆಗೆದುಹಾಕಬೇಕೆಂದು ಕೋರಲಾಗಿತ್ತು.

SCROLL FOR NEXT