ಕೊರೋನಾ ಕಂಡಲ್ಲಿ ಅದನ್ನು ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ: ಶಿವಸೇನೆ ಶಾಸಕ 
ದೇಶ

ನನಗೆ ಕೊರೋನಾ ವೈರಸ್ ಕಂಡರೆ ಅದನ್ನು ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ: ಶಿವಸೇನೆ ಶಾಸಕ

ಮಹಾರಾಷ್ಟ್ರದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಪೂರೈಕೆ ವಿಷಯದಲ್ಲಿ ವಿವಾದ ಉಂಟಾಗಿರುವ ಬೆನ್ನಲ್ಲೇ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ನೀಡಿರುವ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಪೂರೈಕೆ ವಿಷಯದಲ್ಲಿ ವಿವಾದ ಉಂಟಾಗಿರುವ ಬೆನ್ನಲ್ಲೇ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ನೀಡಿರುವ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸಿದೆ. "ಕೊರೋನ ಕಂಡುಬಂದಲ್ಲಿ ಅದನ್ನು ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ" ಎಂದು ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ.

ಶಿವಸೇನೆ ಶಾಸಕನ ಹೇಳಿಕೆಗೆ ವಿಪಕ್ಷಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ರೆಮ್ಡಿಸಿವಿರ್ ಚಚ್ಚು ಮದ್ದನ್ನು ಅತಿ ಹೆಚ್ಚು ಸಂಗ್ರಹ ಮಾಡಿಕೊಂಡ ಔಷಧ ಕಂಪನಿಯ ಮಾಲಿಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದನ್ನು ಫಡ್ನವೀಸ್ ವಿರೊಧಿಸಿದ್ದರು. ಮಾಜಿ ಮುಖ್ಯಮಂತ್ರಿಗಳ ನಡೆ ಆಡಳಿತ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದೆ.

ಶಾಸಕ ಸಂಜಯ್ ಗಾಯಕ್ವಾಡ್ ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ್ದು, "ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದರೆ, ಸಾಂಕ್ರಾಮಿಕ ಎದುರಾಗಿರುವ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುತ್ತಿದ್ದರು?" ಎಂದು ಪ್ರಶ್ನಿಸಿದ್ದಾರೆ. 

"ಇಂತಹ ಪರಿಸ್ಥಿತಿಯಲ್ಲಿ ಸಚಿವರನ್ನು ಬೆಂಬಲಿಸುವುದು ಬಿಟ್ಟು ಬಿಜೆಪಿ ನಾಯಕರು ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಹಾಗೂ ಈ ಸರ್ಕಾರ ಹೇಗೆ ವಿಫಲವಾಗಲಿದೆ ಎಂಬುದನ್ನು ನೋಡುತ್ತಿದ್ದಾರೆ. ಆದ್ದರಿಂದ ಕೊರೋನಾ ವೈರಸ್ ಕಾಣುವಂತಿದ್ದಿದ್ದರೆ ನಾನು ಅದನ್ನು ದೇವೇಂದ್ರ ಫಡ್ನವಿಸ್ ಅವರ ಬಾಯೊಳಗೆ ಹಾಕುತ್ತಿದ್ದೆ ಎಂದು ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಕಚ್ಚಾ ತೈಲ ಬೆಲೆ ಭಾರೀ ಇಳಿಕೆ; ಪೆಟ್ರೋಲ್, ಡೀಸೆಲ್ ದರ ಕಮ್ಮಿ ಮಾಡ್ತಾರಾ ಮೋದಿ?

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

Stanford Graduation Ceremony: ಗೂಗಲ್ CEO ಸುಂದರ್ ಪಿಚೈ ವೇದಿಕೆ ಏರುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು! Video

"Are You Taking Something?": ರಕ್ತ ಪರೀಕ್ಷೆ ಮಾಡಿಸು, ಯೂಟ್ಯೂಬರ್ ಐಶೋಸ್ಪೀಡ್ ಕಾಲೆಳೆದ ರೊನಾಲ್ಡೊ! Video ವೈರಲ್

ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ತಾಯಿಯ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಿಚ್ಚಿಟ್ಟ ಬ್ಯಾಲದ ಕೋಚ್! VIDEO

SCROLL FOR NEXT