ದೇಶ

ವಿಮಾನ ಸೀಟಿನಡಿ 23 ಲಕ್ಷ ರೂ. ಮೊತ್ತದ ಚಿನ್ನ ಕಳ್ಳಸಾಗಣೆ: ಸಿಬ್ಬಂದಿಗಳದೇ ಕೃತ್ಯ ಶಂಕೆ

Harshavardhan M

ಹೈದರಾಬಾದ್: ಚಿನ್ನವನ್ನು ಪೇಸ್ಟ್ ರೂಪಕ್ಕೆ ಮಾರ್ಪಾಡು ಮಾಡಿ, ಚಿನ್ನದ ಪೇಸ್ಟನ್ನು ವಿಮಾನದ ಸೀಟಿನ ಪಾಕೆಟ್ ನಲ್ಲಿದ್ದ ಖಾಲಿ ಜಾಗದೊಳಕ್ಕೆ ತುಂಬಿ ಕಳ್ಳಸಾಗಣೆ ಮಾಡುತ್ತಿದ್ದುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 

ವಿಮಾನ ಗುವಾಹಟಿಯೀಂದ ಹೈದರಾಬಾದಿಗೆ ಪ್ರಯಾಣಿಸುತ್ತಿತ್ತು. ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಇದಾಗಿದೆ. 472.8 ಗ್ರಾಂ ತೂಕದ ಚಿನ್ನ ಪತ್ತೆಯಾಗಿದ್ದು, 23.3 ಲಕ್ಷ ರೂ. ಮೌಲ್ಯವನ್ನು ಹೊಂದಿದೆ. 

ಸಂಸ್ಥೆಯ ಸಿಬ್ಬಂದಿಯೇ ಈ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆಯನ್ನು ಕಸ್ಟಮ್ಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

SCROLL FOR NEXT