ದೇಶ

ಮನೆ ಮಾಲೀಕನ ಪುತ್ರಿ ಸ್ನಾನದ ವಿಡಿಯೊ ಚಿತ್ರೀಕರಣ ಮಾಡಿದ 16 ವರ್ಷದ ಬಾಲಕ: ಪ್ರಕರಣ ದಾಖಲು

Harshavardhan M

ಹೈದರಾಬಾದ್: 30 ವರ್ಷದ ಯುವತಿಯೋರ್ವಳು ತಾನು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಚಿತ್ರೀಕರಣ ಮಾಡಿದ್ದಾಗಿ 16 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. 

ಹೈದರಾಬಾದ್ ನಿವಾಸಿಯಾಗಿರುವ ಯುವತಿ ಅಪಾರ್ಟ್ ಮೆಂಟ್ ಮಾಲೀಕರ ಪುತ್ರಿ ಎಂದು ತಿಳಿದುಬಂದಿದೆ. ಆರೋಪಿ ಬಾಲಕನ ಕುಟುಂಬ ಅದೇ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗಿದ್ದಾರೆ. 

ಪೊಲೀಸರು ಐಪಿಸಿ ಸೆಕ್ಷನ್ 354 ಅಡಿ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ದೂರು ನೀಡಿರುವ ಯುವತಿ ಮೂರು ತಿಂಗಳ ಹಿಂದೆ ಆರೋಪಿ ತನ್ನ ಸ್ನಾನದ ವಿಡಿಯೋ ಚಿತ್ರೀಕರಣ ಮಾಡಿದ್ದಾಗಿ ಹೇಳಿಕೆ ನೀಡಿರುವುದು ಗೊಂದಲ ಸೃಷ್ಟಿಸಿದೆ. ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ಕೈಗೊಂಡಿದ್ದಾರೆ.

SCROLL FOR NEXT