ದೇಶ

ಮುಂಗಾರು ಅಧಿವೇಶನ ವೇಳೆ ಸಂಸತ್ ಹೊರಗೆ ರೈತರ ಪ್ರತಿಭಟನೆ

Nagaraja AB

ನವದೆಹಲಿ: ಮುಂಗಾರು ಅಧಿವೇಶನದ ವೇಳೆ ಪ್ರತಿದಿನ ಸಂಸತ್ ಹೊರಗೆ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಸುಮಾರು 200 ರೈತರ ಗುಂಪೊಂದು ಪ್ರತಿಭಟನೆ ನಡೆಸಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಹೇಳಿದೆ.

ಸಂಸತ್ತಿನ ಒಳಗಡೆ ಪ್ರತಿಭಟನೆ ನಡೆಸುವಂತೆ ಮುಂಗಾರು ಅಧಿವೇಶನ ಆರಂಭವಾಗುವ ಎರಡು ದಿನ ಮುನ್ನ ಎಲ್ಲಾ ಪ್ರತಿಪಕ್ಷಗಳ ಸಂಸದರಿಗೆ ಎಚ್ಚರಿಕೆ ಪತ್ರ ನೀಡಲಾಗುವುದು ಎಂದು 40 ರೈತ ಯೂನಿಯನ್ ಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿತು. 

ಸಂಸತ್ ಹೊರಗಡೆ ನಾವು ಪ್ರತಿಭಟನೆ ನಡೆಸುತ್ತಿದ್ದರೆ ಒಳಗಡೆ ಪ್ರತಿದಿನ ಪ್ರತಿಭಟನೆ ನಡೆಸುವಂತೆ ಪ್ರತಿಪಕ್ಷಗಳ ಸದಸ್ಯರಿಗೆ ಹೇಳುತ್ತೇವೆ. ಅಧಿವೇಶನದಿಂದ ಹೊರನಡೆಯುವ ಮೂಲಕ ಕೇಂದ್ರಕ್ಕೆ ಪ್ರಯೋಜನವಾಗದಂತೆ ನಾವು ಅವರಿಗೆ ಹೇಳುತ್ತೇವೆ. ಸರ್ಕಾರವು ಸಮಸ್ಯೆಯನ್ನು ಬಗೆಹರಿಸುವವರೆಗೆ ಅಧಿವೇಶನವನ್ನು ನಡೆಸಲು ಬಿಡಬೇಡಿ ಎಂದು ರೈತ ಮುಖಂಡ ಗುರ್ನಾಮ್ ಸಿಂಗ್ ಚಾರುಣಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

SCROLL FOR NEXT