ದೇಶ

ಲಡಾಕ್ ಲಡಾಯಿ: ಭಾರತ-ಚೀನಾ ಮಧ್ಯೆ ಈ ವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಿರೀಕ್ಷೆ

Sumana Upadhyaya

ನವದೆಹಲಿ: ಭಾರತ ಮತ್ತು ಚೀನಾ ಪೂರ್ವ ಲಡಾಕ್ ನ ಗಡಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸುವ ಸಾಧ್ಯತೆಯಿದೆ, ಲಡಾಕ್ ನ ಗಡಿಭಾಗದ ಸಂಘರ್ಷ ಸ್ಥಳಗಳಿಂದ ಎರಡೂ ದೇಶಗಳು ಸೈನಿಕರನ್ನು ಹಿಂತೆಗೆದುಕೊಳ್ಳುವ ಕುರಿತು ಸರಣಿ ಮಾತುಕತೆಗಳ ಮುಂದುವರಿದ ಭಾಗ ಇದು ಆಗಿರಲಿದೆ.

ಭಾರತ-ಚೀನಾ ಗಡಿ ವ್ಯವಹಾರಗಳ (ಡಬ್ಲ್ಯುಎಂಸಿಸಿ) ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯತಂತ್ರ ಚೌಕಟ್ಟಿನಡಿಯಲ್ಲಿ ನಡೆಯುವ ಮಾತುಕತೆ, ಪೂರ್ವ ಲಡಾಕ್‌ನಲ್ಲಿ ಉಭಯ ದೇಶಗಳ ಉಗ್ರರ ನಡುವೆ ಉದ್ವಿಗ್ನತೆಯನ್ನು ನಿವಾರಿಸಲು ವಿಶಾಲ ತತ್ವಗಳಡಿ ಹಲವು ವಿಚಾರಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಉಭಯ ದೇಶಗಳ ಮಧ್ಯೆ ನಾಳೆ ಮಾತುಕತೆ ನಡೆಯುವ ಸಾಧ್ಯತೆಯಿದೆ, ಈ ಹೊಂದೆ ಕೊನೆಯ ಬಾರಿಗೆ ಎರಡೂ ದೇಶಗಳ ಮಧ್ಯೆ ಮಾತುಕತೆ ನಡೆದಿದ್ದು ಮಾರ್ಚ್ 12ರಂದು. ರಾಜತಾಂತ್ರಿಕ ಮಾತುಕತೆಯ ನಂತರ ಮತ್ತೊಂದು ಸುತ್ತು ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಮೇ ತಿಂಗಳಿನಿಂದ ಪೂರ್ವ ಲಡಾಕ್ ನಲ್ಲಿ ಸೇನೆ ಹಿಂಪಡೆತಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಚೀನಾ ಹಲವು ಸುತ್ತಿನ ಮಾತುಕತೆಯಲ್ಲಿ ನಿರತವಾಗಿವೆ.

SCROLL FOR NEXT