ದೇಶ

3 ದಿನಗಳಲ್ಲಿ ರಾಜ್ಯಗಳಿಗೆ 51 ಲಕ್ಷ ಲಸಿಕೆ ಡೋಸ್: ಕೇಂದ್ರ 

Srinivas Rao BV

ನವದೆಹಲಿ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ 1.84 ಕೋಟಿ ಲಸಿಕೆ ಡೋಸ್ ಗಳಿದ್ದು, ಇನ್ನು 3 ದಿನಗಳಲ್ಲಿ ರಾಜ್ಯಗಳಿಗೆ 51 ಲಕ್ಷ ಲಸಿಕೆ ಡೋಸ್ ಗಳನ್ನು ಕಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ವರೆಗೂ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 20 ಕೋಟಿಗೂ ಹೆಚ್ಚಿನ ಲಸಿಕೆಯನ್ನು ಉಚಿತವಾಗಿ ಪೂರೈಕೆ ಮಾಡಿದೆ ಎಂದು ಹೇಳಿದೆ. 

ಈ ಪೈಕಿ ಮೇ.14 ವರೆಗೂ 18,43,67,772 ಡೋಸ್ ಗಳು ಖರ್ಚಾಗಿವೆ. 1.84 ಕೋಟಿಗೂ ಹೆಚ್ಚು ಲಸಿಕೆಗಳು ಉಳಿದಿವೆ. ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ರೂಪಿಸುವ ಕ್ರಮಗಳಲ್ಲಿ ಲಸಿಕೆ ನೀಡುವುದು ಅವಿಭಾಜ್ಯ ಅಂಶವಾಗಿದೆ ಎಂದು ಸರ್ಕಾರ ತಿಳಿಸಿದೆ.

SCROLL FOR NEXT