ವಾಲ್ಮೀಕಿ ಜಯಂತಿಯಂದು ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ 
ದೇಶ

ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ: ಸಿಎಂ ಬೊಮ್ಮಾಯಿ

ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ.7.5ರಷ್ಟನ್ನು ಹೆಚ್ಚಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು: ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ.7.5ರಷ್ಟನ್ನು ಹೆಚ್ಚಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಾಲ್ಮೀಕಿ ಸಮುದಯದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬೊಮ್ಮಾಯಿ,ಮೀಸಲಾತಿ ಪುನರ್ ತೀರ್ಮಾನ ಕೇಂದ್ರಮಟ್ಟದಲ್ಲಿ ಆಗಬೇಕಿದ್ದು, ಕಾನೂನು ಚೌಕಟ್ಟಿನಲ್ಲಿಯೇ ಮೀಸಲಾತಿ ಬಗೆಹರಿಸಬೇಕಿದೆ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ. ಎಲ್ಲರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ. ಇದು‌ ಅಷ್ಟು ಸುಲಭವೂ ಅಲ್ಲ ಆದರೂ ನಾನು ಪೂರಕ ಪ್ರಯತ್ನ ನಡೆಸಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಹಾಗೂ ವಾಲ್ಮೀಕಿ ಸಮುದಾಯದ ಶ್ರೀಗಳ ಆಶೀರ್ವಾದ ಮುಖ್ಯ ಎಂದರು.

ನಾನು ಸಿಎಂ ಆಗುತ್ತಿದ್ದಂತೆ ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ ತೆಗೆದೆ.7600 ಕೋಟಿ ರೂ.ಅನುದಾನ ಈ ಇಲಾಖೆಗೆ ನೀಡಿದ್ದು,ಸಮುದಾಯದ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ.

ಎಸ್ಸಿ,ಎಸ್ಟಿಗೆ ಭೂ ಒಡೆತನ ಕಾರ್ಯಕ್ರಮ ಮಾಡಿದ್ದೇವೆ.ಸ್ವಯಂ ಉದ್ಯೋಗ ಯೋಜನೆ ತಂದಿದ್ದೇವೆ.ಪರಿಶಿಷ್ಟ ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ.ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಚರ್ಚೆಯಿದೆ.50% ಒಳಗೆ ನಾವು ಮೀಸಲಾತಿ ವಿತರಿಸಬೇಕು. 

ಮೀಸಲಾತಿ ಹೆಚ್ಚಳಕ್ಕೆ ಎಲ್ಲಾ ಸಮುದಾಯಗಳ ಆಶೋತ್ತರ ಹೆಚ್ಚಾಗಿದೆ. ಮೀಸಲಾತಿ ‌ನೀಡುವುದು ಸುಲಭದ ಕೆಲಸವಲ್ಲವಾದರೂ ಮೀಸಲಾತಿ ಬಗ್ಗೆ ‌ನಾವು ಚಿಂತನೆ ‌ನಡೆಸಿದ್ದೇವೆ.ಆದಷ್ಟು ಬೇಗ ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಬಗೆ ಹರಿಸುತ್ತೇವೆ.ವಾಲ್ಮೀಕಿ ಸಮುದಾಯ ಬೆಳೆಯುತ್ತಿದ್ದು, ಇದಕ್ಕೆ ಸಮನಾದ ‌ಮೀಸಲಾತಿ‌ ಇರಬೇಕು.ಈ‌ ನಿಟ್ಟಿನಲ್ಲಿ ‌ಸರ್ಕಾರ ಕೆಲಸ ಮಾಡುತ್ತಿದೆ.ವಾಲ್ಮೀಕಿ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸಹಾಯವನ್ನು ಮಾಡುತ್ತೇವೆ. ಈಗಾಗಲೇ ನಬಾರ್ಡ್ ಜೊತೆ ಮಾತನಾಡಿದ್ದೇನೆ. ಈ ಸಮುದಾಯದ ಹಲವಾರು ನಿರೀಕ್ಷೆ ಇದೆ. ಮೀಸಲಾತಿ ಬಗ್ಗೆ ಬಹುದೊಡ್ಡ ಬೇಡಿಕೆ ಇದೆ.ಇದನ್ನು 50% ಒಳಗೆ ಈ ಸಮಸ್ಯೆ ಬಗೆ ಹರಿಸಬೇಕಿದೆ.ಪ್ರಧಾನಿ ಮೊದಿ ಇದನ್ನು ಅರಿತು 10% ಮೀಸಲಾತಿ ಹೆಚ್ಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇದನ್ನು ಅರ್ಥ ಮಾಡಿಕೊಂಡು 10 ಶೇ ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡುವ ತೀರ್ಮಾನ ಮಾಡಿದ್ದಾರೆ.ಮೀಸಲಾತಿ ಹೆಚ್ಚಳ ವಿಚಾರವಾಗಿ ಪುನರ್ ಚರ್ಚೆ ಹಾಗೂ ತೀರ್ಮಾನ ಆಗಬೇಕಿದೆ.ಸಾಮಾಜಿಕ ಹಿಂದುಳಿದವರಿಗೆ ಈ ಮೀಸಲಾತಿ ಸಹಕಾರಿ ಆಗುತ್ತದೆ.ವಾಲ್ಮೀಕಿ ಸಮುದಾಯದ ಸ್ವಾಮೀಜಿ ಆಶಯದಂತೆ ಸರ್ಕಾರ ‌ಕೆಲಸ ಮಾಡುತ್ತಿದೆ. ಈಗಾಗಲೇ ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ‌ಮಾಡಿದ್ದೇವೆ. ಈ ಸಮಾಜದ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಈ‌ ಸಮಾಜದ ಬಡ ಜನರಿಗೆ ಭೂಮಿ ‌ಕೊಡಬೇಕೆನ್ನುವುದು ನನ್ನ ಸರ್ಕಾರದ ಉದ್ದೇಶ ಎಂದು ಸೂಚ್ಯವಾಗಿ ಹೇಳಿದರು.

ನಮ್ಮನ್ನು ನಾವೇ ಮೌಲ್ಯಮಾಪನ ಮಾಡಿ, ಆತ್ಮವಿಶ್ವಾಸದೊಂದಿಗೆ ಮುನ್ನಡೆಯುವ ದಿನ ಇದಾಗಿದೆ .ಸಾಹಿತ್ಯದ ಜಗತ್ತನ್ನು ಬದಲಾವಣೆ ಮಾಡಿದ ಶ್ರೇಷ್ಠ ವ್ಯಕ್ತಿತ್ವದ ವಾಲ್ಮೀಕಿಯದ್ದು ಕಾಲಾತೀತರಾಗಿರುವ ವ್ಯಕ್ತಿತ್ವ.ಮನಕುಲ ಇರುವವರೆಗೂ ವಾಲ್ಮೀಕಿ ಚಿಂತನೆ ಜೀವಂತವಾಗಿರುತ್ತದೆ. ಭಾರತಕ್ಕೆ ಸಂಸ್ಕೃತಿ ಕೊಟ್ಟ ಏಕಮೇವ ಕವಿ ವಾಲ್ಮೀಕಿ ಎಂದು ಸಿಎಂ ವಾಲ್ಮೀಕಿ ಮಹಾತ್ಮೆ ವಿವರಿಸಿದರು. ವಾಲ್ಮೀಕಿ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಆರುಮಂದಿಗೆ ಸಿಎಂ ಪ್ರಶಸ್ತಿ ವಿತರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT