ದೇಶ

ಸಲಿಂಗಕಾಮಿ ಮಹಿಳೆಯರ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್: ಬೇಷರತ್ ಕ್ಷಮೆಯಾಚನೆ

Harshavardhan M

ನವದೆಹಲಿ: ಸ್ವದೇಶಿ ದಿನಬಳಕೆಯ ಉತ್ಪನ್ನ ತಯಾರಕ ಸಂಸ್ಥೆ ಡಾಬರ್ ಉತ್ತರಭಾರತೀಯರ ಕರ್ವಾಚೌತ್ ಹಬ್ಬ ಕುರಿತಾದ ತನ್ನ ವಿವಾದಾತ್ಮಕ ಜಾಹೀರಾತನ್ನು ಹಿಂದಕ್ಕೆ ಪಡೆದುಕೊಂಡಿದೆ. ಅಲ್ಲದೆ ಆ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಬೇಷರತ್ ಕ್ಷಮೆ ಯಾಚಿಸಿದೆ. 

ಜಾಹೀರಾತಿನಲ್ಲಿ ಇಬ್ಬರು ಸಲಿಂಗಕಾಮಿ ಮಹಿಳೆಯರು ಕರ್ವಾಚೌತ್ ಹಬ್ಬ ಆಚರಣೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು. ಉತ್ತರಭಾರತದಲ್ಲಿ ಕರ್ವಾ ಚೌತ್ ಗೆ ಬಹಳ ಮಹತ್ವದ ಸ್ಥಾನವಿದೆ. ವಿವಾಹಿತ ಮಹಿಳೆ ವೈವಾಹಿಕ ಬಾಂಧವ್ಯ ಹಾಗೂ ಗಂಡನ ಶ್ರೇಯೋಭಿವೃದ್ಧಿಗಾಗಿ ಕರ್ವಾ ಚೌತ್ ಆಚರಣೆ ಮಾಡುತ್ತಾರೆ.

ಪವಿತ್ರ ಹಿನ್ನೆಲೆಯುಳ್ಳ ಈ ಆಚರಣೆಯನ್ನು ಕುರಿತಾದ ಜಾಹೀರಾತಿನಲ್ಲಿ ಇಬ್ಬರು ಮಹಿಳೆಯರು ಸತಿಪತಿಗಳಂತೆ ಆಚರಣೆ ಮಾಡುವುದನ್ನು ಆಡಳಿತಾರೂಢ ಬಿಜೆಪಿ ಪಕ್ಷದ ಹಿರಿಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ವಿರುದ್ಧ ಅನೇಕರು ಟೀಕೆ ಮಾಡಿದ್ದರು. ಇದರಿಂದಾಗಿ ಡಾಬರ್ ಸಂಸ್ಥೆ ಜಾಹೀರಾತನ್ನು ಹಿಂಪಡೆದುಕೊಂಡಿದೆ. ಇತ್ತೀಚಿಗಷ್ಟೆ ಫ್ಯಾಬ್ ಇಂಡಿಯಾ ಜಾಹೀರಾತು ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಂಡನೆ ವ್ಯಕ್ತಪಡಿಸಿದ್ದರು.

SCROLL FOR NEXT