ದೇಶ

ಉದ್ಯೋಗಿಗಳಿಗೆ ವರ್ಗಾವಣೆ ಸ್ಥಳ ಒತ್ತಾಯಿಸುವ ಹಕ್ಕಿಲ್ಲ: ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂ

Harshavardhan M

ನವದೆಹಲಿ: ತನ್ನ ಉದ್ಯೋಗಿಯನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕೆಂಬುದು ಸಂಸ್ಥೆಗೆ ಬಿಟ್ಟ ವಿಚಾರ. ತನ್ನನ್ನು ಇದೇ ಸ್ಥಳಕ್ಕೆ ವರ್ಗಾವಣೆ ಮಾಡಿ ಎಂದು ಸೂಚಿಸುವ ಅಧಿಕಾರ ಉದ್ಯೋಗಿಗೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. 

ಮಹಿಳಾ ಉಪನ್ಯಾಸಕರೊಬ್ಬರು ಈ ಸಂಬಂಧ ಅಲಾಹಾಬಾದ್ ಹೈಕೋರ್ಟ್ ನಲ್ಲಿ 2017ರಲ್ಲಿ ದಾವೆ ಹೂಡಿದ್ದರು. ತಮಗೆ ಬೇಕಾದ ಕಡೆ ಕಾಲೇಜು ಸಂಸ್ಥೆ ವರ್ಗಾವಣೆ ಮಾಡುತ್ತಿಲ್ಲ ಎಂದು ಅವರು ಅರ್ಜಿ ಸಲ್ಲಿಸಿದ್ದರು. 

ಅಲಾಹಾಬಾದ್ ಹೈಕೋರ್ಟ್ ಅದು ಸಂಸ್ಥೆಯವರಿಗೆ ಬಿಟ್ಟ ವಿಚಾರ. ಅವರಿಗೆ ಎಲ್ಲಿ ಅವಶ್ಯಕತೆ ಇರುತ್ತದೆಯೋ ಅಲ್ಲಿಗೆ ವರ್ಗಾವಣೆ ಮಾಡುವುದು ಅವರ ಅಧಿಕಾರ ಎಂದು ತೀರ್ಪು ನೀಡಿತ್ತು. ಅರ್ಜಿದಾರರು ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 

SCROLL FOR NEXT