ಸಾಂದರ್ಭಿಕ ಚಿತ್ರ 
ದೇಶ

ಮುಂಬೈ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹರಿತ ಆಯುಧಗಳಿಂದ ಹಲ್ಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ 42 ವರ್ಷದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮನೆಯೊಳಗೆ ನುಗ್ಗಿದ ಮೂವರು ಕಾಮುಕರು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ 42 ವರ್ಷದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮನೆಯೊಳಗೆ ನುಗ್ಗಿದ ಮೂವರು ಕಾಮುಕರು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬುಧವಾರ ಮುಂಜಾನೆ ಕುರ್ಲಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಮತ್ತು ಸಂತ್ರಸ್ತೆ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. 

ಮಹಿಳೆಯ ಮೇಲೆ ಆರೋಪಿಗಳು ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದ್ದು, ಸಿಗರೇಟಿನಿಂದ ಆಕೆಯ ಖಾಸಗಿ ಅಂಗಗಳನ್ನು ಸುಟ್ಟಿದ್ದು, ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಯೊಬ್ಬ ಇಡೀ ಘಟನೆಯನ್ನು ವಿಡಿಯೋ ಮಾಡಿದ್ದು, ಪೊಲೀಸರಿಗೆ ತಿಳಿಸಿದರೆ ವಿಡಿಯೋವನ್ನು ಎಲ್ಲೆಡೆ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದರು. 

ಮಹಿಳೆ ತನ್ನ ನೆರೆಹೊರೆಯವರಿಗೆ ಘಟನೆಯನ್ನು ವಿವರಿಸಿದ್ದು, ನಂತರ ಎನ್ ಜಿಒವೊಂದರ ಸಂಪರ್ಕದಿಂದ ಕುರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376( ಅತ್ಯಾಚಾರ) 376ಡಿ (ಗ್ಯಾಂಗ್ ರೇಪ್ ) 377 ( ಅಸ್ವಾಭಾವಿಕ ಲೈಂಗಿಕತೆ) ಮತ್ತಿತರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರೂರು ಕಾಲ್ತುಳಿತ ದುರಂತ: 36 ಮಂದಿ ಸಾವು; ತಮಿಳುನಾಡಿನಿಂದ ವರದಿ ಕೇಳಿದ ಕೇಂದ್ರ; TVK ವಿಜಯ್ ಪ್ರತಿಕ್ರಿಯೆ ಏನು?

ಕರೂರ್ ಕಾಲ್ತುಳಿತ ಘಟನೆ ತನಿಖೆಗೆ ಆಯೋಗ; ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ: ಸಿಎಂ ಸ್ಟಾಲಿನ್ ಘೋಷಣೆ

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 36ಕ್ಕೂ ಹೆಚ್ಚು ಮಂದಿ ಸಾವು; ಪ್ರಧಾನಿ ಸಂತಾಪ; ಸಿಎಂ ಸ್ಟಾಲಿನ್ ಹೇಳಿದ್ದು ಏನು?

Asia CUP 2025: ಭಾರತ-ಪಾಕ್ ಫೈನಲ್ ಪಂದ್ಯಕ್ಕೂ ಮುನ್ನ ಕಿಡಿ ಹೊತ್ತಿಸಿದ PCB ಮುಖ್ಯಸ್ಥ! ಏನಿದು?

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 8 ಮಕ್ಕಳು ಸೇರಿ 36 ಮಂದಿ ಸಾವು; 40 ಜನರಿಗೆ ಗಂಭೀರ ಗಾಯ!

SCROLL FOR NEXT