ಮಮತಾ ಬ್ಯಾನರ್ಜಿ 
ದೇಶ

"ನಿಮ್ಮ ತಾಯಿ ಎಂದರೆ ನಮ್ಮ ತಾಯಿ": ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಮಮತಾ ಬ್ಯಾನರ್ಜಿ ಸಂತಾಪ

ನಿಮ್ಮ ತಾಯಿ ಎಂದರೆ ಅವರು ನಮಗೂ ತಾಯಿಯೇ ಎಂದು ಹೇಳಿರುವ ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಮೋದಿಯವರ ತಾಯಿ ನಿಧನಕ್ಕೆ ಶುಕ್ರವಾರ ಸಂತಾಪ ಸೂಚಿಸಿದ್ದಾರೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಿಮ್ಮ ತಾಯಿ ಎಂದರೆ ಅವರು ನಮಗೂ ತಾಯಿಯೇ ಎಂದು ಹೇಳಿರುವ ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಮೋದಿಯವರ ತಾಯಿ ನಿಧನಕ್ಕೆ ಶುಕ್ರವಾರ ಸಂತಾಪ ಸೂಚಿಸಿದ್ದಾರೆ.

 ಪಶ್ಚಿಮ ಬಂಗಾಳದ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, "ಗೌರವಾನ್ವಿತ ಪ್ರಧಾನಿ, ಇಂದು ನಿಮಗೆ ವೈಯಕ್ತಿಕವಾಗಿ ದುಃಖದ ದಿನವಾಗಿದೆ ಮತ್ತು ಇದು ನಿಮ್ಮ ವೈಯಕ್ತಿಕ ಜೀವನದ ದೊಡ್ಡ ನಷ್ಟವಾಗಿದೆ. ನಾನು ದೇವರನ್ನು ಪ್ರಾರ್ಥಿಸುತ್ತೇನೆ, ನಿಮ್ಮ ಕ್ರಿಯೆ ಮತ್ತು ಚಟುವಟಿಕೆಗಳಿಂದ ನಿಮ್ಮ ತಾಯಿಯನ್ನು ಪ್ರೀತಿಸುವಂತೆ ದೇವರು ನಿಮಗೆ ಶಕ್ತಿಯನ್ನು ನೀಡುತ್ತಾನೆ ಮತ್ತು ಆಶೀರ್ವದಿಸುತ್ತಾನೆ. ನಾನು ನಿಮಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ. ಏಕೆಂದರೆ, ನೀವು ಪಶ್ಚಿಮ ಬಂಗಾಳಕ್ಕೆ ಬರಬೇಕಾಗಿತ್ತು. ಆದರೆ, ನಿಮ್ಮ ತಾಯಿಯ ನಿಧನದಿಂದಾಗಿ ನೀವು ಬರಲು ಸಾಧ್ಯವಾಗಲಿಲ್ಲ, ಆದರೂ ವರ್ಚುವಲ್ ಮೂಲಕ ನಮ್ಮೊಂದಿಗಿದ್ದೀರಿ ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮ ತಾಯಿಯ ಅಂತ್ಯಕ್ರಿಯೆಯಿಂದ ಕರ್ತವ್ಯಕ್ಕೆ ಮರಳಿರುವುದರಿಂದ ಕಾರ್ಯಕ್ರಮವನ್ನು ಮೊಟಕುಗೊಳಿಸಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡರು.

"ನಿಮ್ಮ ಕುಟುಂಬ ಸದಸ್ಯರಿಗೆ ಮತ್ತು ಇತರರಿಗೆ ಸಂತಾಪ ಸೂಚಿಸುತ್ತೇನೆ. ಈ ಪರಿಸ್ಥಿತಿಯಲ್ಲಿ ಯಾವ ರೀತಿ ಮಾತನಾಡಬೇಕೆಂಬುದು ನನಗೆ ತಿಳಿಯುತ್ತಿಲ್ಲ. ನಿಮ್ಮ ತಾಯಿ ಎಂದರೆ ನಮ್ಮ ತಾಯಿ ಕೂಡ. ನನಗೆ ನನ್ನ ತಾಯಿಯೂ ನೆನಪಾಗುತ್ತಾರೆ. ನಿಮ್ಮ ಕೆಲಸವನ್ನು ಮುಂದುವರಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ-ಸಮೃದ್ಧಿಗೆ ‘ವಿಶ್ವಾಸಾರ್ಹ ಪಾಲುದಾರಿಕೆ’ ಅಗತ್ಯ: Quad ಸಭೆಯಲ್ಲಿ ಜೈಶಂಕರ್‌ ಮಹತ್ವದ ಕರೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ತಮಿಳುನಾಡು ಸರ್ಕಾರದಿಂದ ಮತ್ತೊಂದು ಮಹತ್ವದ ಘೋಷಣೆ: ಸಣ್ಣ ರೈತರ ₹50,000 ವರೆಗಿನೆ ಬೆಳೆ ಸಾಲ ಮನ್ನಾ!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

SCROLL FOR NEXT