ದೇಶ

ಕಾಶ್ಮೀರ: ಶೂಟ್ ಮಾಡಿಕೊಂಡು ಬಿಎಸ್ಎಫ್ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ

Lingaraj Badiger

ಜಮ್ಮು: ದೇಶದ ಗಡಿ ಕಾಯುತ್ತಿದ್ದ ಸೇನಾ ಯೋಧರೊಬ್ಬರು ಸೋಮವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜಮ್ಮು ನಗರದ ಹೊರವಲಯದಲ್ಲಿರುವ ಕನ್ಹಚಕ್‌ನಲ್ಲಿರುವ ಅಂತರಾಷ್ಟ್ರೀಯ ಗಡಿ ಬಳಿಯ ಗಡಿ ಪೋಸ್ಟ್‌ನಲ್ಲಿ ಬಿಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ತನ್ನ ಸರ್ವಿಸ್ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸ್ ವರದಿ ಪ್ರಕಾರ, ಇಂದು ಬೆಳಗ್ಗೆ 6.35ಕ್ಕೆ ಬಿಎಸ್‌ಎಫ್ ಯೋಧನೊಬ್ಬನಿಗೆ ಗುಂಡಿನ ಸದ್ದು ಕೇಳಿ ಬಂದಿದೆ. ಬಳಿಕ ಗಡಿ ಠಾಣೆಯತ್ತ ಆತ ಓಡಿ ಬಂದಿದ್ದಾನೆ. BOP BT ಫಾರ್ವರ್ಡ್ ಇಂಟರ್ ನ್ಯಾಷನಲ್ ಬಾರ್ಡರ್ ಕನ್ಹಚಕ್ ಬಳಿ ಅವರ ಸಹವರ್ತಿ ಸಬ್-ಇನ್‌ಸ್ಪೆಕ್ಟರ್ ರಾಮ್‌ದೇವ್ ಸಿಂಗ್ ಈ ವೇಳೆ ರಕ್ತಸಿಕ್ತವಾಗಿ ಬಿದ್ದಿದ್ದರು. ಕೂಡಲೇ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.

ಸಬ್ ಇನ್ಸ್ ಪೆಕ್ಟರ್  ರಾಮ್‌ದೇವ್ ಸಿಂಗ್ ಅವರು ತಮ್ಮ ಸೇವಾ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮ್‌ದೇವ್ ಸಿಂಗ್  ಅವರು ಮೂಲತಃ ರಾಜಸ್ಥಾನದ ಸಿಕರ್ ಜಿಲ್ಲೆಯ ನಿವಾಸಿಯಾಗಿದ್ದರು. ಯೋಧನ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಸೇನಾ ಕೋರ್ಟ್ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮ್​ದೇವ್ ಸಿಂಗ್ 12ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದು, ಬಿಎಸ್‌ಎಫ್‌ನ ತುಕಡಿಗೆ ಕಮಾಂಡರ್ ಆಗಿದ್ದರು. ಅವರು ತಮ್ಮ ಸರ್ವಿಸ್ ರಿವಾಲ್ವರ್​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT