ದೇಶ

ಆಂಧ್ರದ ಗುಂಟೂರಿನಲ್ಲಿ 8 ವರ್ಷದ ಬಾಲಕನಿಗೆ ಮಂಕಿಪಾಕ್ಸ್ ಲಕ್ಷಣ: ಆಸ್ಪತ್ರೆಗೆ ದಾಖಲು

Ramyashree GN

ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶನಿವಾರ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾದ ನಂತರ ಆತಂಕ ಸೃಷ್ಟಿಯಾಗಿದೆ.

ಎಂಟು ವರ್ಷದ ಬಾಲಕನಿಗೆ ಮಂಕಿಪಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಬಳಿಕ ಸರ್ಕಾರಿ ಜನರಲ್ ಆಸ್ಪತ್ರೆಗೆ (ಜಿಜಿಹೆಚ್) ದಾಖಲಿಸಲಾಗಿದೆ.

ಬಾಲಕ ಒಡಿಶಾ ಮೂಲದವನಾಗಿದ್ದು, 15 ದಿನಗಳ ಹಿಂದೆ ಆಂಧ್ರಪ್ರದೇಶಕ್ಕೆ ಬಂದಿದ್ದ. ಅದಾದ ಒಂದು ವಾರದ ನಂತರ ಈತನಿಗೆ ಜ್ವರ ಮತ್ತು ದದ್ದುಗಳು ಕಾಣಿಸಿಕೊಂಡಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಜಿಎಚ್‌ನ ಆಡಳಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಮಾತನಾಡಿ, 'ಬಾಲಕನಿಗೆ ದದ್ದುಗಳು ಮತ್ತು ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದಿವೆ. ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಿ ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಮಾದರಿಗಳನ್ನು ಸಂಗ್ರಹಿಸಿ ಎನ್‌ಐವಿ ಪುಣೆಗೆ ಕಳುಹಿಸಲಾಗಿದೆ. ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ ದೇಶದಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಮೂರು ಪ್ರಕರಣಗಳು ಕೇರಳದಿಂದ ಮತ್ತು ಒಂದು ದೆಹಲಿಯಲ್ಲಿ ಕಂಡುಬಂದಿವೆ.

SCROLL FOR NEXT