ರಾಹುಲ್ ಗಾಂಧಿ ಪಾದಯಾತ್ರೆ 
ದೇಶ

ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನಟಿ ಪೂಜಾ ಭಟ್ ಸಾಥ್

ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ತೆಲಂಗಾಣದಲ್ಲಿರುವ ರಾಹುಲ್ ಗಾಂಧಿ ತಮ್ಮ ಭೇಟಿಯ ಏಳನೇ ದಿನವಾದ ನವೆಂಬರ್ 1 ರಂದು ಹೈದರಾಬಾದ್ ಪ್ರವೇಶಿಸಿದರು. ಇಂದು ತೆಲಂಗಾಣದಲ್ಲಿ ಎಂಟನೇ ದಿನ ಯಾತ್ರೆಯಾಗಿದೆ.

ಹೈದರಾಬಾದ್: ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ತೆಲಂಗಾಣದಲ್ಲಿರುವ ರಾಹುಲ್ ಗಾಂಧಿ ತಮ್ಮ ಭೇಟಿಯ ಏಳನೇ ದಿನವಾದ ನವೆಂಬರ್ 1 ರಂದು ಹೈದರಾಬಾದ್ ಪ್ರವೇಶಿಸಿದರು. ಇಂದು ತೆಲಂಗಾಣದಲ್ಲಿ ಎಂಟನೇ ದಿನ ಯಾತ್ರೆಯಾಗಿದೆ.

ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಬುಧವಾರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ಯಾತ್ರೆಗೆ ಸಾಥ್ ನೀಡಿದ ಮೊದಲ ಬಾಲಿವುಡ್ ಸೆಲೆಬ್ರಿಟಿ ಪೂಜಾ ಭಟ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುತ್ತಾ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೂಜಾ ಅವರು ರಾಹುಲ್  ಗಾಂಧಿಯವರೊಂದಿಗೆ ಬಿರುಸಿನ ವೇಗದಲ್ಲಿ ಸ್ವಲ್ಪ ದೂರ ನಡೆದಾಗ ಜನರು ಹರ್ಷೋದ್ಗಾರ ಮಾಡಿದ್ದಾರೆ.

ನಟಿ-ನಿರ್ದೇಶಕಿ-ನಿರ್ಮಾಪಕಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಅವರು 1989 ರ ಚಲನಚಿತ್ರ "ಡ್ಯಾಡಿ" ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದ್ದರು.

ಯಾತ್ರೆಯು ಹೈದರಾಬಾದ್ ನಗರದ ಎಂಜಿಬಿ ಬಜಾಜ್ ಶೋರೂಮ್, ಬಾಲಾನಗರ ಮುಖ್ಯ ರಸ್ತೆಯಲ್ಲಿ ಪುನರಾರಂಭವಾಗಿದ್ದು, ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಮಹಿಳಾ ಮೀಸಲಾತಿ ಕುರಿತ ಚರ್ಚೆ: ಏ.15 ಕ್ಕೆ ಎಲ್ಲಾ ವಿರೋಧ ಪಕ್ಷಗಳ ಸಭೆ- ಮಲ್ಲಿಕಾರ್ಜುನ ಖರ್ಗೆ

SCROLL FOR NEXT