ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶದ ಅಜಂಗಢ: ನಾಪತ್ತೆಯಾಗಿದ್ದ ದಲಿತ ಬಾಲಕಿಯ ಕತ್ತರಿಸಿದ ರೀತಿಯಲ್ಲಿದ್ದ ಶವ ಪತ್ತೆ

ನಾಪತ್ತೆಯಾಗಿದ್ದ ದಲಿತ ಬಾಲಕಿಯ ವಿರೂಪಗೊಳಿಸಿದ ಶವ ಗುರುವಾರ ಅಜಂಗಢದಲ್ಲಿನ ಪೊದೆಗಳಲ್ಲಿ ಪತ್ತೆಯಾಗಿದೆ. ಅಕ್ಟೋಬರ್ 15 ರಿಂದ ಬಾಲಕಿ ಕಾಣೆಯಾಗಿದ್ದು, ಆಕೆಯ ತಂದೆ ದೂರು ದಾಖಲಿಸಿದ್ದರು.

ಅಜಂಗಢ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ದಲಿತ ಬಾಲಕಿಯ ಕತ್ತರಿಸಿದ ರೀತಿಯಲ್ಲಿರುವ ಶವ ಗುರುವಾರ ಅಜಂಗಢದಲ್ಲಿನ ಪೊದೆಗಳಲ್ಲಿ ಪತ್ತೆಯಾಗಿದೆ. ಅಕ್ಟೋಬರ್ 15 ರಿಂದ ಬಾಲಕಿ ಕಾಣೆಯಾಗಿದ್ದು, ಆಕೆಯ ತಂದೆ ದೂರು ದಾಖಲಿಸಿದ್ದರು.

ಮಜೌಲಿ ಗ್ರಾಮದ ಗ್ರಾಮಸ್ಥರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆರಳಚ್ಚು ತಂಡ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡದೊಂದಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದ ತನಿಖೆಗಾಗಿ ತಂಡವನ್ನು ರಚಿಸಲಾಗಿದ್ದು, ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಜಂಗಢ್‌ನ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ರುಶಿಯಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

NCERT ಪಠ್ಯಪುಸ್ತಕ ವಿವಾದ: ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ; ಬಿಜೆಪಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT