ರಜೌರಿ: ಎರಡು ವಾರಗಳ ಹಿಂದೆ ಒಳನುಸುಳುವಿಕೆಗೆ ಯತ್ನಿಸುತ್ತಿದ್ದ ವೇಳೆ ಬಂಧಿತ ಪಾಕಿಸ್ತಾನಿ ಭಯೋತ್ಪಾದಕ ಹೃದಯಾಘಾತದಿಂದ ಶನಿವಾರ (ಸೆಪ್ಟೆಂಬರ್ 3) ಸಾವನ್ನಪ್ಪಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಸೇನಾ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದ.
ತಬರಕ್ ಹುಸೇನ್ ಎಂದು ಗುರುತಿಸಲಾದ ಭಯೋತ್ಪಾದಕ ಕಳೆದ ತಿಂಗಳು ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ನುಸುಳಲು ಪ್ರಯತ್ನಿಸಿದ್ದ. ಸೇನೆಯ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡಿದ್ದ.
ಆಸ್ಪತ್ರೆಯಲ್ಲಿ ಭಯೋತ್ಪಾದಕನೊಂದಿಗೆ ಇಂಡಿಯಾ ಟುಡೇ ಮಾತನಾಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಫಿದಾಯಿನ್ ಭಯೋತ್ಪಾದಕ ದಾಳಿಯನ್ನು ನಡೆಸಲು ಪಾಕಿಸ್ತಾನದ ಸೇನೆಯು ತನ್ನನ್ನು ಕಳುಹಿಸಿದೆ ಎಂದು ಬಹಿರಂಗಪಡಿಸಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರದ ಸಬ್ಜ್‌ಕೋಟ್ ಗ್ರಾಮದ ನಿವಾಸಿ ಹುಸೇನ್, ಭಾರತೀಯ ಸೇನಾ ಪೋಸ್ಟ್ ಮೇಲೆ ದಾಳಿ ಮಾಡುವ ಯೋಜನೆಯನ್ನು ಒಪ್ಪಿಕೊಂಡಿದ್ದಾನೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಎಂಬುವವರು ತನಗೆ 30,000 ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸಿದ್ದರು ಎಂದು ತಬಾರಕ್ ಹುಸೇನ್ ಹೇಳಿಕೆ ನೀಡಿದ್ದಾನೆ. ತಬಾರಕ್, ಇತರ ಭಯೋತ್ಪಾದಕರೊಂದಿಗೆ ಸೇರಿ ಸೂಕ್ತ ಸಮಯದಲ್ಲಿ ದಾಳಿ ನಡೆಸುವ ಉದ್ದೇಶದಿಂದ ಭಾರತೀಯ ಫಾರ್ವರ್ಡ್ ಪೋಸ್ಟ್‌ಗಳ ಮೇಲೆ ಕಣ್ಣಿಟ್ಟಿದ್ದಾಗಿ ಬಹಿರಂಗಪಡಿಸಿದ್ದಾನೆ.
ಆಗಸ್ಟ್ 21 ರಂದು ಕರ್ನಲ್ ಯೂನಸ್ ಚೌಧರಿ ಅವರು ಭಾರತೀಯ ಪೋಸ್ಟ್‌ಗಳನ್ನು ಗುರಿಯಾಗಿಸಲು ಮುಂದಾದರು. ಪ್ರಾಸಂಗಿಕವಾಗಿ, ಇದೇ ವ್ಯಕ್ತಿಯನ್ನು ಮೊದಲು ಭಾರತೀಯ ಸೇನೆಯು ತನ್ನ ಸಹೋದರ ಹರೂನ್ ಅಲಿ ಜೊತೆಗೆ 2016 ರಲ್ಲಿ ಅದೇ ವಲಯದಿಂದ ಬಂಧಿಸಿತ್ತು. ಬಳಿಕ ಮಾನವೀಯ ಆಧಾರದ ಮೇಲೆ ನವೆಂಬರ್ 2017ರಲ್ಲಿ ಸ್ವದೇಶಕ್ಕೆ ಕಳುಹಿಸಲಾಗಿತ್ತು.