ಅತ್ಯಾಚಾರ 
ದೇಶ

ಕನ್ಯತ್ವ ಪರೀಕ್ಷೆಯಲ್ಲಿ ಅತ್ಯಾಚಾರ ಸಂತ್ರಸ್ಥೆ ವಿಫಲ; 10 ಲಕ್ಷ ರೂ. ದಂಡ ಹಾಕಿದ ಕಾಪ್ ಪಂಚಾಯಿತಿ

ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಅತ್ಯಾಚಾರ ಸಂತ್ರಸ್ಥೆಗೆ ಅಲ್ಲಿನ ಕಾಪ್ ಪಂಚಾಯಿತಿ 10 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಜೈಪುರ: ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಅತ್ಯಾಚಾರ ಸಂತ್ರಸ್ಥೆಗೆ ಅಲ್ಲಿನ ಕಾಪ್ ಪಂಚಾಯಿತಿ 10 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಭಿಲ್ವಾರಾದಲ್ಲಿ 24 ವರ್ಷದ ವಿವಾಹಿತ ಮಹಿಳೆಯೊಬ್ಬರನ್ನು ಆಕೆಯ ಪತಿ ಮತ್ತು ಕುಟುಂಬಸ್ಥರೇ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿ, ಪರೀಕ್ಷೆಯಲ್ಲಿ ಆಕೆ ವಿಫಲವಾದ ಕಾರಣ ಮಹಿಳೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಕನ್ಯತ್ವ ಪರೀಕ್ಷೆಗಾಗಿ ಆಕೆಯ ಅತ್ತೆ ಮಾವಂದಿರು ಆಕೆಯನ್ನು ಥಳಿಸಿದ್ದಾರೆ ಮತ್ತು ಪಂಚಾಯತಿ ಸೇರಿಸಿ ಆಕೆಯ ಕುಟುಂಬಕ್ಕೆ  10 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ ಎಂದು  ಪೊಲೀಸರು ಹೇಳಿದ್ದಾರೆ.

ಮೇ 11 ರಂದು ಭಿಲ್ವಾರಾದಲ್ಲಿ ತನ್ನ ಮದುವೆಯ ಮೊದಲ ದಿನದಂದು ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಲಾಗಿತ್ತು ಎಂಬುದು ಮಹಿಳೆ ತನ್ನ ಅತ್ತೆಯ ವಿರುದ್ಧ ನೀಡಿರುವ ದೂರಿನ ಪ್ರಕಾರ ತಿಳಿದುಬಂದಿದೆ.  ಎಫ್‌ಐಆರ್‌ನಲ್ಲಿ ಆಕೆಯ ಪತಿ ಮತ್ತು ಅವರ ಕುಟುಂಬವು ಕನ್ಯತ್ವ ಪರೀಕ್ಷೆಯಲ್ಲಿ ನಾನು ವಿಫಲವಾದ ನಂತರ ತನ್ನ ಮೇಲೆ ಹಲ್ಲೆ ನಡೆಸಿದರು. ಮೇ 31 ರಂದು ಸ್ಥಳೀಯ ದೇವಸ್ಥಾನದಲ್ಲಿ ಪಂಚಾಯತ್ ಕರೆದು ತನ್ನ ಕುಟುಂಬಕ್ಕೆ 10 ಲಕ್ಷ ಪಾವತಿಸುವಂತೆ ಕೇಳಿದರು ಎನ್ನಲಾಗಿದೆ.

ಮದುವೆಗೂ ಮುನ್ನ ತನ್ನ ನೆರೆಹೊರೆಯವರಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ತನ್ನ ಅತ್ತೆಯ ಬಳಿ ಮಹಿಳೆ ಹೇಳಿಕೊಂಡಿದ್ದಾಗಿ ಆಕೆ ಹೇಳಿದ್ದಾಳೆ. ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೇಷನ್ ಹೌಸ್ ಆಫೀಸರ್ (ಬಾಗೋರ್) ಆಯೂಬ್ ಖಾನ್ ಅವರು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ನಂತರ ಪೊಲೀಸರು ತನಿಖೆ ನಡೆಸಿದ್ದಾರೆ ಮತ್ತು ಶನಿವಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂಸಿ ಅಲೆಮಾರಿ ಸಮುದಾಯದವರಲ್ಲಿ ಪ್ರಚಲಿತವಿರುವ ಕುಕಾಡಿ ಪ್ರಾತಃ ಸಂಪ್ರದಾಯಕ್ಕೆ ಮಹಿಳೆ ಬಲಿಯಾಗಿದ್ದಾಳೆ ಎಂದು ಮಂಡಲ ಡಿಎಸ್ಪಿ ಸುರೇಂದ್ರ ಕುಮಾರ್ ತಿಳಿಸಿದ್ದು, ರಾಜಸ್ಥಾನದಲ್ಲಿ ಕುಕಾಡಿ ಪ್ರಾತ ಎಂದು ಕರೆಯಲ್ಪಡುವ ಸಾಮಾಜಿಕ ಅನಿಷ್ಟ ಪದ್ಧತಿಯಿದು. ಇಲ್ಲಿ ಮದುವೆಯಾದ ಮಹಿಳೆಯರಿಗೆ ಕನ್ಯತ್ವ ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ.

ವಿಷಯ ಬೆಳಕಿಗೆ ಬಂದ ನಂತರ, ವಾಸ್ತವ ವರದಿಯನ್ನು ಸಲ್ಲಿಸಲಾಗಿದೆ ಮತ್ತು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 498ಎ (ವರದಕ್ಷಿಣೆ), 384 (ಸುಲಿಗೆ), 509 (ಮಹಿಳೆಯರ ಮರ್ಯಾದೆಗೆ ಅವಮಾನ) ಮತ್ತು 120 ಬಿ (ಅಪರಾಧ ಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel