ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕೋವಿಡ್ ಪೀಡಿತ ವೃದ್ಧರು ಒಂದು ವರ್ಷದೊಳಗೆ ಅಲ್ಝೈಮರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು: ಅಧ್ಯಯನ

ಕೊರೊನಾವೈರಸ್ ಸೋಂಕಿಗೆ ಒಳಗಾದ ವೃದ್ಧರು ಸೋಂಕು ತಗುಲಿದ ಒಂದು ವರ್ಷದೊಳಗೆ ಅಲ್ಝೈಮರ್ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಿದೆ ಎಂದು ಸಂಶೋಧನೆಯೊಂದರಲ್ಲಿ ತಿಳಿದುಬಂದಿದೆ.

ಪ್ರಾತಿನಿಧಿಕ ಚಿತ್ರ
Ramyashree GN
Updated On : 15 Sept 2022, 2:50 pm

ನವದೆಹಲಿ: ಕೊರೊನಾವೈರಸ್ ಸೋಂಕಿಗೆ ಒಳಗಾದ ವೃದ್ಧರು ಸೋಂಕು ತಗುಲಿದ ಒಂದು ವರ್ಷದೊಳಗೆ ಅಲ್ಝೈಮರ್ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಿದೆ ಎಂದು ಸಂಶೋಧನೆಯೊಂದರಲ್ಲಿ ತಿಳಿದುಬಂದಿದೆ.

65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಆರು ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಅಧ್ಯಯನವು ಈ ಜನರಲ್ಲಿ ಅಪಾಯ ಶೇ 50 ರಿಂದ 80 ರಷ್ಟು ಹೆಚ್ಚಾಗುತ್ತದೆ ಎಂದು ಹೇಳಿದೆ. ಆದಾಗ್ಯೂ, 85 ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಿನ ಅಪಾಯ ಕಂಡುಬಂದಿದೆ.

ಅಲ್ಝೈಮರ್ ಕಾಯಿಲೆಯ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಕೋವಿಡ್-19 ಅಲ್ಝೈಮರ್ ಕಾಯಿಲೆಯ ಹೊಸ ಬೆಳವಣಿಗೆಯನ್ನು ಪ್ರಚೋದಿಸುತ್ತದೆಯೇ ಅಥವಾ ಅದರ ಹೊರಹೊಮ್ಮುವಿಕೆಯನ್ನು ವೇಗಗೊಳಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ ಎಂದು ತಿಳಿಸಿದೆ.

Advertisement

Advertisement

ಇದನ್ನೂ ಓದಿ: ಮರೆವು ಮತ್ತು ನೆನಪಿನ ಶಕ್ತಿ ಕಳೆದುಕೊಳ್ಳುವ ಬಗ್ಗೆ ನಿಮಗೆಷ್ಟು ಗೊತ್ತು?

'ಆಲ್ಝೈಮರ್ ಕಾಯಿಲೆಯ ಬೆಳವಣಿಗೆಗೆ ಕಾರಣವಾಗುವ ಅಂಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಆದರೆ, ಮುಂಚಿನ ಸೋಂಕುಗಳು ವಿಶೇಷವಾಗಿ ವೈರಲ್ ಸೋಂಕುಗಳು ಮತ್ತು ಉರಿಯೂತವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ' ಎಂದು ಡಿಸ್ಟಿಂಗ್ವಿಶ್ಡ್ ಯೂನಿವರ್ಸಿಟಿ ಪ್ರೊಫೆಸರ್ ಪಮೇಲಾ ಡೇವಿಸ್ ತಿಳಿಸಿದ್ದಾರೆ.

'SARS-CoV2 ಸೋಂಕು ಉರಿಯೂತ ಸೇರಿದಂತೆ ಕೇಂದ್ರ ನರಮಂಡಲದ ಅಸಹಜತೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ, ಅಲ್ಪಾವಧಿಯಲ್ಲಿಯೂ ಸಹ ಕೋವಿಡ್-19 ಈ ರೋಗನಿರ್ಣಯವನ್ನು ಹೆಚ್ಚಿಸಬಹುದೇ ಎಂಬುದನ್ನು ಪರೀಕ್ಷಿಸಲು ನಾವು ಬಯಸಿದ್ದೇವೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments