ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್ಜಿ 
ದೇಶ

Moonlighting ಉದ್ಯೋಗಿಗಳ ವಜಾ: ವಿಪ್ರೋ ಮುಖ್ಯಸ್ಥರಿಗೆ ಬಂತು ದ್ವೇಷಪೂರಿತ ಮೇಲ್ ಗಳು! 

ಏಕಕಾಲಕ್ಕೆ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಿದ್ದ (moonlighting employees) 300 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದ್ದಕ್ಕೆ ವಿಪ್ರೋ ಅಧ್ಯಕ್ಷ ರಿಶದ್ ಪ್ರೇಮ್ ಜಿ ಗೆ ದ್ವೇಷಪೂರಿತ ಇ-ಮೇಲ್ ಗಳು ಬರಲಾರಂಭಿಸಿವೆ.

ಬೆಂಗಳೂರು: ಏಕಕಾಲಕ್ಕೆ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಿದ್ದ (moonlighting employees) 300 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದ್ದಕ್ಕೆ ವಿಪ್ರೋ ಅಧ್ಯಕ್ಷ ರಿಶದ್ ಪ್ರೇಮ್ ಜಿ ಗೆ ದ್ವೇಷಪೂರಿತ ಇ-ಮೇಲ್ ಗಳು ಬರಲಾರಂಭಿಸಿವೆ.
 
ರಿಶದ್ ಪ್ರೇಮ್ ಜಿ ತಮ್ಮ ಪ್ರತಿಸ್ಪರ್ಧಿ ಕಂಪನಿಯೊಂದಕ್ಕೆ ಹಾಗೂ ತಮ್ಮ ಸಂಸ್ಥೆಗೆ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ 300 ಮಂದಿ ಉದ್ಯೋಗಿಗಳನ್ನು ತೆಗೆದುಹಾಕಿರುವುದಾಗಿ ಸೆ.21 ರಂದು ಬಹಿರಂಗಪಡಿಸಿದ್ದರು. 

ಅಖಿಲ ಭಾರತ ನಿರ್ವಹಣಾ ಸಂಘದ ರಾಷ್ಟ್ರೀಯ ನಿರ್ವಹಣಾ ಸಮಾವೇಶದಲ್ಲಿ ಮಾತನಾಡಿದ ಪ್ರೇಮ್ ಜಿ, ವಿಪ್ರೋಗೂ ಕೆಲಸ ಮಾಡಿಕೊಂಡು ಅದರ ಪ್ರತಿಸ್ಪರ್ಧಿಗಳಿಗೂ ನೇರವಾಗಿ ಕೆಲಸ ಮಾಡುವ ಮಂದಿ ಇದ್ದಾರೆ ಎಂದು ವಾಸ್ತವದ ಸಂಗತಿ. ಮೂನ್ ಲೈಟಿಂಗ್ ಎಂಬುದು ರಹಸ್ಯವಾಗಿ ಎರಡನೇ ಕೆಲಸದಲ್ಲಿ ತೊಡಗುವುದಾಗಿದೆ.

ಟೆಕ್ ಕ್ಷೇತ್ರದಲ್ಲಿ ಮೂನ್ ಲೈಟಿಂಗ್ ಬಗ್ಗೆ ಮೊದಲ ಬಾರಿಗೆ ಮಾತನಾಡಿರುವ ವ್ಯಕ್ತಿ ವಿಪ್ರೋ ಅಧ್ಯಕ್ಷರಾಗಿದ್ದು, ಈ ಕ್ಷೇತ್ರದಲ್ಲಿ ಮೂನ್ ಲೈಟಿಂಗ್ ನ್ನು ನೇರಾನೇರವಾಗಿ ಮೋಸ ಎಂದು ವ್ಯಾಖ್ಯಾನಿಸಿದ್ದಾರೆ. ಎರಡೆರಡು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಇನ್ಫೋಸಿಸ್ ಇತ್ತೀಚೆಗೆ ಇ-ಮೇಲ್ ಮೂಲಕ ಎಚ್ಚರಿಕೆ ನೀಡಿ, ಈ ನಿಯಮದ ಉಲ್ಲಂಘನೆ ಮಾಡಿದ್ದೇ ಆದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಹೇಳಿತ್ತು.
 
ಮಹೇಂದ್ರ ಸಿಎಇಒ ಸಿಪಿ ಗುರ್ನಾನಿ ಮೂನ್ ಲೈಟಿಂಗ್ ಬಗ್ಗೆ ಟ್ವೀಟ್ ಮಾಡಿ, ಬದಲಾದ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುವುದು ಅಗತ್ಯ, ನಾವು ಕಾರ್ಯನಿರ್ವಹಿಸುವ ವಿಧಾನಗಳಲ್ಲಿ ಬದಲಾವಣೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದರೆ, ನಾಸೆಂಟ್ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸೆನೆಟ್ ನಿಯಮ ಉಲ್ಲಂಘನೆ ಮಾಡುವ ಉದ್ಯೋಗಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT