ದೇಶ

ಮೊದಲು 'ಕಾಂಗ್ರೆಸ್ ಜೋಡೋ ಯಾತ್ರೆ' ಮಾಡಿ: ಕಾಂಗ್ರೆಸ್ ಕಾಲೆಳೆದ ಎಎಪಿ

Vishwanath S

ನವದೆಹಲಿ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಆಮ್ ಆದ್ಮಿ ಪಕ್ಷ(ಎಎಪಿ) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತನ್ನ 'ಭಾರತ್ ಜೋಡೋ ಯಾತ್ರೆ'ಯನ್ನು ಮುಂದುವರಿಸುವ ಬದಲು ಮೊದಲು 'ಕಾಂಗ್ರೆಸ್ ಜೋಡೋ ಯಾತ್ರೆ' ನಡೆಸಲಿ ಎಂದು ಹೇಳಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ರಾಜಸ್ಥಾನ ರಾಜಕೀಯ ಹೈಡ್ರಾಮಾ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಿರಿಯ ನಾಯಕ ಸಚಿನ್ ಪೈಲಟ್ ಅವರನ್ನು ಲೇವಡಿ ಮಾಡಿದೆ, ಇಬ್ಬರು ಕಾಂಗ್ರೆಸ್ ನಾಯಕರು ತಮ್ಮ 'ಅಧಿಕಾರದ ಹೋರಾಟ'ದಲ್ಲಿ ಜನರ ಆದೇಶವನ್ನು 'ಅಪಹಾಸ್ಯ' ಮಾಡಿದ್ದಾರೆ ಎಂದು ಹೇಳಿದೆ.

ಒಂದೆಡೆ, ಕಾಂಗ್ರೆಸ್‌ 'ಭಾರತ್ ಜೋಡೋ ಯಾತ್ರೆ' ನಡೆಸುತ್ತಿದೆ. ಮತ್ತೊಂದೆಡೆ, ರಾಜಸ್ಥಾನದಲ್ಲಿ ಪಕ್ಷದ ಶಾಸಕರು 'ವಿಧಾಯಕ್ ತೋಡೋ ಕಾರ್ಯಕ್ರಮ' (ಶಾಸಕರನ್ನು ವಿಭಜಿಸುವ ಕಾರ್ಯಕ್ರಮ) ನಡೆಸುತ್ತಿದ್ದಾರೆ ರಾಜಸ್ಥಾನದ ಎಎಪಿ ಚುನಾವಣಾ ಉಸ್ತುವಾರಿ ವಿನಯ್ ಮಿಶ್ರಾ ಹೇಳಿದ್ದಾರೆ.

'ಭಾರತ್ ಜೋಡೋ ಯಾತ್ರೆ' ಬದಲಿಗೆ, ಕಾಂಗ್ರೆಸ್ ಮೊದಲು 'ಕಾಂಗ್ರೆಸ್ ಜೋಡೋ ಯಾತ್ರೆ' (ಪಕ್ಷದಲ್ಲಿ ಒಗ್ಗಟ್ಟು ತರುವ ಯಾತ್ರೆ) ಕೈಗೊಳ್ಳಬೇಕು". ರಾಜಸ್ಥಾನದ ದೊಂಬರಾಟ ನೋಡಿ ಇಡೀ ದೇಶವೇ ಅವರನ್ನು ನೋಡಿ ನಗುತ್ತಿದೆ ಎಂದು ಹೇಳಿದರು.

SCROLL FOR NEXT