ನವದೆಹಲಿಯ ಕೆಜಿ ಮಾರ್ಗ್ ನಲ್ಲಿರುವ ಬಿಬಿಸಿ ಕಚೇರಿಯ ಹೊರಗೆ ಮಾಧ್ಯಮ ಸಿಬ್ಬಂದಿ 
ದೇಶ

3ನೇ ದಿನವೂ ಮುಂದುವರಿದ ಐಟಿ ಸಮೀಕ್ಷೆ: ಎರಡು ದಿನಗಳಿಂದ 10 ಹಿರಿಯ ಸಿಬ್ಬಂದಿಗಳು ಬಿಬಿಸಿ ಕಚೇರಿಯಲ್ಲೇ ಲಾಕ್!

ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ 10 ಹಿರಿಯ ಸಿಬ್ಬಂದಿಗಳು 2 ದಿನಗಳಿಂದ ಮನೆಗೆ ತೆರಳಲು ಸಾಧ್ಯವಾಗದೇ ದೆಹಲಿಯ ಕಚೇರಿಯಲ್ಲೇ ಇದ್ದಾರೆ. 

ನವದೆಹಲಿ: ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ 10 ಹಿರಿಯ ಸಿಬ್ಬಂದಿಗಳು 2 ದಿನಗಳಿಂದ ಮನೆಗೆ ತೆರಳಲು ಸಾಧ್ಯವಾಗದೇ ದೆಹಲಿಯ ಕಚೇರಿಯಲ್ಲೇ ಇದ್ದಾರೆ. 

ಐಟಿ ಅಧಿಕಾರಿಗಳ ಕಾರ್ಯಾಚರಣೆ ಮೂರನೇ ದಿನವೂ ಮುಂದುವರಿದಿದ್ದು, ಹಣಕಾಸಿನ ದಾಖಲೆಗಳನ್ನು ಸಂಗ್ರಹಿಸಿದ್ದು, ಬಿಬಿಸಿ ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಲೆಕ್ಕಪತ್ರಗಳ ದಾಖಲೆ ಪ್ರತಿಗಳನ್ನು ಪಡೆದುಕೊಂಡಿದ್ದಾರೆ. 

ದೆಹಲಿಯಲ್ಲಿರುವ ಬಿಬಿಸಿ ಸಿಬ್ಬಂದಿ ಮಾಹಿತಿ ನೀಡಿದ್ದು, ಐಟಿ ಅಧಿಕಾರಿಗಳ ಕಾರ್ಯಾಚರಣೆ ನಡೆಯುತ್ತಿರುವಾಗಿನಿಂದಲೂ ಬಿಬಿಸಿ ಎಂದಿನಂತೆ ತನ್ನ ಸುದ್ದಿ ಪ್ರಸಾರ ಮಾಡುತ್ತಿದೆ ಹಾಗೂ ಸಂಸ್ಥೆಯ ಹಲವು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ. ದೆಹಲಿ ಹಾಗೂ ಮುಂಬೈ ಕಚೇರಿಗಳಲ್ಲಿ ಮಂಗಳವಾರದಂದು ಬೆಳಿಗ್ಗೆ 11:30 ಕ್ಕೆ ಐಟಿ ಸಮೀಕ್ಷೆ ಪ್ರಾರಂಭವಾಗಿತ್ತು 45 ಗಂಟೆಗಳ ನಂತರವೂ ಮುಂದುವರೆದಿದೆ. 

ಯಾವಾ ಸಮೀಕ್ಷೆ ಮುಕ್ತಾಯಗೊಳ್ಳುತ್ತದೆ ಎಂಬುದು ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ತೆರಿಗೆ ಮತ್ತು ಬಹುರಾಷ್ಟ್ರೀಯ ನಿಗಮದ ವಿವಿಧ ವಿಭಾಗಗಳ ನಡುವೆ ಹಣವನ್ನು ವರ್ಗಾವಣೆ ಮಾಡಿರ್ಪುವ ವಿಧಾನದ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ಕೆಲಹೊತ್ತು ಧ್ಯಾನ

'ಮೋದಿ ಅಭಿಮಾನಿಗಳು ಬಳಸುವ ಭಾಷೆ...; ಕ್ಷಮಿಸುವುದಲ್ಲ, ನೀವೇ ಕ್ಷಮೆ ಕೇಳಬೇಕು': ಪ್ರಧಾನಿ ವಿಡಿಯೋಗೆ ಉದ್ಧವ್ ಠಾಕ್ರೆ ಟಾಂಗ್

ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ ಕೆರಳಿದ ಆಪ್; E20 ವಿರುದ್ಧ ಆ. 4ರಂದು ಪ್ರಧಾನಿ ನಿವಾಸ ಚಲೋ ಘೋಷಿಸಿದ ಕೇಜ್ರಿವಾಲ್

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಹಿಮಪಾತ: ಪರ್ವತಾರೋಹಣ ದಿಗ್ಗಜ 'Nims' Purja ದುರಂತ ಅಂತ್ಯ, ಕೊನೆಯ ಕ್ಷಣದ Video ವೈರಲ್

ಕಾವೇರಿ ಕಿಚ್ಚಿನ ನಡುವೆಯೇ ಕೊಡಗಿನಲ್ಲಿ ಭಾರಿ ಮಳೆ: ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ! ಹಾರಂಗಿ ಭರ್ತಿ, Video