ನಾಯಕರುಗಳೊಂದಿಗೆ ಅಜಿತ್ ಪವಾರ್ 
ದೇಶ

ಎನ್‌ಡಿಎ ಸಭೆಯಲ್ಲಿ ಅಜಿತ್ ಪವಾರ್ ಬಣ ಭಾಗವಹಿಸಲಿದೆ: ಪ್ರಫುಲ್ ಪಟೇಲ್

ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಬಣ ಮತ್ತು ಅದರ 15 ಶಾಸಕರು ಸೋಮವಾರ ಮುಂಬೈನ ವೈಬಿ ಚವಾಣ್ ಸೆಂಟರ್‌ನಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ಪಕ್ಷ ಒಗ್ಗಟ್ಟಿನಿಂದ ಇರುವಂತೆ ನೋಡಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.

ನವದೆಹಲಿ: ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಬಣ ಮತ್ತು ಅದರ 15 ಶಾಸಕರು ಸೋಮವಾರ ಮುಂಬೈನ ವೈಬಿ ಚವಾಣ್ ಸೆಂಟರ್‌ನಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ಪಕ್ಷ ಒಗ್ಗಟ್ಟಿನಿಂದ ಇರುವಂತೆ ನೋಡಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.

ಈ ಮಧ್ಯೆ ಮಂಗಳವಾರ ದೆಹಲಿಯಲ್ಲಿ ನಡೆಯಲಿರುವ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಸಭೆಯಲ್ಲಿ ಅಜಿತ್ ಪವಾರ್ ಮತ್ತು ಅವರ ಬಣ ಭಾಗವಹಿಸಲಿದೆ ಎಂದು ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಅವರು ತಿಳಿಸಿದ್ದಾರೆ.

"ಶರದ್ ಪವಾರ್ ಅವರೊಂದಿಗಿನ ಇಂದಿನ ಸಭೆಯಲ್ಲಿ, ಎನ್‌ಸಿಪಿ ಒಗ್ಗಟ್ಟಿನಿಂದ ಇರುವುದನ್ನು ಖಚಿತಪಡಿಸಿಕೊಳ್ಳಲು ನಾವು ಮತ್ತೆ ಅವರನ್ನು ಕೇಳಿಕೊಂಡಿದ್ದೇವೆ" ಎಂದು ಪಟೇಲ್ ಹೇಳಿದ್ದಾರೆ.

ಭಾನುವಾರ ನಡೆದ ಸಭೆಯಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದ ಶಾಸಕರು (ಅಜಿತ್ ಪವಾರ್ ಬಣದ) ಇಂದು ಹಾಜರಿದ್ದರು ಎಂದು ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!