ದೇಶ

ಏಕರೂಪ ನಾಗರಿಕ ಸಂಹಿತೆ ಭಾರತದ ಕಲ್ಪನೆಗೆ ವಿರುದ್ಧವಾಗಿದೆ: ಬಿಜೆಪಿ ಮಿತ್ರ, ಮೇಘಾಲಯ ಸಿಎಂ ಸಂಗ್ಮಾ

Lingaraj Badiger

ಶಿಲ್ಲಾಂಗ್‌: 'ಈಗಿನ ಸ್ವರೂಪದಲ್ಲಿರುವ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕನ್ರಾಡ್ ಕೆ ಸಂಗ್ಮಾ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಶಿಲ್ಲಾಂಗ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ, ಬಿಜೆಪಿ ಮಿತ್ರ ಪಕ್ಷ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ, ವೈವಿಧ್ಯತೆಯೇ ಭಾರತದ ಶಕ್ತಿ ಎಂದು ಪ್ರತಿಪಾದಿಸಿದರು.

"ಭಾರತವು ವೈವಿಧ್ಯಮಯ ರಾಷ್ಟ್ರ ಎಂಬ ಕಲ್ಪನೆಗೆ ಯುಸಿಸಿ ವಿರುದ್ಧವಾಗಿದೆ ಎಂದು ಎನ್‌ಪಿಪಿ ಭಾವಿಸುತ್ತದೆ. ವೈವಿಧ್ಯತೆಯು ನಮ್ಮ ಶಕ್ತಿ ಮತ್ತು ಗುರುತಾಗಿದೆ" ಎಂದು ಮೇಘಾಲಯ ಸಿಎಂ ಹೇಳಿದ್ದಾರೆ. 

ಈಶಾನ್ಯವು ವಿಶಿಷ್ಟ ಸಂಸ್ಕೃತಿ ಮತ್ತು ಸಮಾಜವನ್ನು ಪಡೆದುಕೊಂಡಿದೆ ಮತ್ತು ಹಾಗೆಯೇ ಉಳಿಯಲು ಬಯಸುತ್ತದೆ ಎಂದು ಸಂಗ್ಮಾ ತಿಳಿಸಿದ್ದಾರೆ.

SCROLL FOR NEXT