ಶೂ ಶೋರೂಂಗೆ ನುಗ್ಗಿದ ಟ್ರಾಕ್ಟರ್ 
ದೇಶ

ಚಾಲಕನಿಲ್ಲದೆ ಶೋರೂಂಗೆ ನುಗ್ಗಿದ ಟ್ರಾಕ್ಟರ್: ವಿಡಿಯೋ ವೈರಲ್

ಶೋರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ವೊಂದು ಚಾಲಕನಿಲ್ಲದೆ ಹೋದರೂ ಅಚಾನಕ್ಕಾಗಿ ಸ್ಟಾರ್ಟ್ ಆಗಿ ನೇರವಾಗಿ ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಲಖನೌ: ಶೋರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ವೊಂದು ಚಾಲಕನಿಲ್ಲದೆ ಹೋದರೂ ಅಚಾನಕ್ಕಾಗಿ ಸ್ಟಾರ್ಟ್ ಆಗಿ ನೇರವಾಗಿ ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಉತ್ತರ ಪ್ರದೇಶದ ಬಿಜ್ನೋರ್ ನ ಕೊತ್ವಾಲಿ ನಗರದ ಮುಂಭಾಗದಲ್ಲಿ ಶೂ ಶೋರೂಮ್ ನಲ್ಲಿ ಈ ಘಟನೆ ವರದಿಯಾಗಿದ್ದು, ಶೋ ರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ನೋಡನೋಡುತ್ತಲೇ ದಿಢೀರ್ ಸ್ಟಾರ್ಟ್ ಆಗಿ ಶೋ ರೂಂಗೆ ನುಗ್ಗಿದೆ. ಈ ವೇಳೆ ಶೋರೂಂ ಗ್ಲಾಸ್ ಡೋರ್ ಛಿದ್ರವಾಗಿದ್ದು, ಟ್ರಾಕ್ಟರ್ ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. 

ವೈರಲ್ ವೀಡಿಯೋದಲ್ಲಿ ನಿಗೂಢವಾಗಿ ಟ್ರ್ಯಾಕ್ಟರ್ ಗಾಜು ಒಡೆದು ಶೂ ಶೋರೂಂಗೆ ನುಗ್ಗುತ್ತಿರುವುದು ಕಂಡು ಬಂದಿದೆ. ಅಚ್ಚರಿಯ ವಿಷಯವೆಂದರೆ ಟ್ರ್ಯಾಕ್ಟರ್‌ನಲ್ಲಿ ಚಾಲಕ ಕೂಡ ಇರಲಿಲ್ಲ. ಘಟನೆ ಕುರಿತು ಶೋರೂಂ ಸಿಬ್ಬಂದಿಯಲ್ಲಿ ಗೊಂದಲ ಉಂಟಾಯಿತು. ಬಳಿಕ ನೌಕರರು ಹೇಗೋ ಟ್ರ್ಯಾಕ್ಟರ್ ಬಂದ್ ಮಾಡಿದ್ದಾರೆ. ಟ್ರ್ಯಾಕ್ಟರ್ ನಿಂತ ನಂತರ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಭಾರಿ ಇನ್ಸ್‌ಪೆಕ್ಟರ್ ಕೊತ್ವಾಲಿ ನಗರ ನರೇಂದ್ರ ಗೌರ್ ತಿಳಿಸಿದ್ದಾರೆ. 

ಏನಿದು ಘಟನೆ?
ಇದೇ ಮಂಗಳವಾರ ಸಂಜೆ ಶೋರೂಂನ ಹೊರಭಾಗದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಸ್ಟಾರ್ಟ್ ಆಗಿ ಶೋರೂಂನ ಗಾಜು ಒಡೆದು ಶೋರೂಂಗೆ ನುಗ್ಗಿದೆ. ಘಟನೆಯಿಂದ ಶೋರೂಂನಲ್ಲಿದ್ದ ಸಿಬ್ಬಂದಿ ದಂಗಾಗಿದ್ದಾರೆ. ಶೋರೂಂನಲ್ಲಿದ್ದ ನೌಕರರು ಹೇಗೋ ಟ್ರ್ಯಾಕ್ಟರ್ ನಿಲ್ಲಿಸಿದ್ದಾರೆ. ಘಟನೆಯ ನಂತರ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಘಟನೆಯ ಸಮಯದಲ್ಲಿ ಟ್ರ್ಯಾಕ್ಟರ್‌ನಲ್ಲಿ ಯಾವುದೇ ಚಾಲಕ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಟ್ರ್ಯಾಕ್ಟರ್ ತಾನಾಗಿಯೇ ಸ್ಟಾರ್ಟ್ ಆಗಿ ಶೋರೂಂ ಪ್ರವೇಶಿಸಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

"ವಾವ್!! ನನ್ನ ಮಟ್ಟಿಗೆ ಅವರು ಚೆನ್ನಾಗಿ ವಿವರಿಸಿದ್ದಾರೆ": 'ನಾನು ಹೆಮ್ಮೆಯ ಅಂಧಭಕ್ತೆ' ಎಂದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್'ಗೆ ಕಂಗನಾ ಬೆಂಬಲ

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು