ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಿಜೆಪಿ ಪಕ್ಷ 'ವಾಷಿಂಗ್ ಮೆಶಿನ್', 2024ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಡಬೇಕು: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಕೆಂಪು ರಸ್ತೆಯಲ್ಲಿ ತಮ್ಮ ಎರಡು ದಿನಗಳ ಧರಣಿಯ ಮೊದಲ ದಿನವಾದ ನಿನ್ನೆ ಬುಧವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದ ಸಂದರ್ಭ
Sumana Upadhyaya
Updated On : 4 Apr 2023, 10:56 am

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಕೆಂಪು ರಸ್ತೆಯಲ್ಲಿ ತಮ್ಮ ಎರಡು ದಿನಗಳ ಧರಣಿಯ ಮೊದಲ ದಿನವಾದ ನಿನ್ನೆ ಬುಧವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು. ಅಗತ್ಯಬಿದ್ದರೆ ದೆಹಲಿಯ ಪ್ರಧಾನಿ ನಿವಾಸದ ಮುಂದೆ ಕೂಡ ಪ್ರತಿಭಟನೆ ಮಾಡುವುದಾಗಿ ಹೇಳಿದರು. 

"ನಾನು ಧರಣಿ ಕುಳಿತುಕೊಳ್ಳಬಹುದೇ ಅಥವಾ ಬೇಡವೇ ಎಂಬ ಪ್ರಶ್ನೆಗಳನ್ನು ಹಲವರು ಎತ್ತುತ್ತಿದ್ದಾರೆ, ನಾನು ಒಂದು ಕೋಟಿ ಬಾರಿಯಾದರೂ ಧರಣಿ ನಡೆಸಬಲ್ಲೆ. ಬೇಕಾದರೆ ಪ್ರಧಾನಿ ನಿವಾಸದ ಎದುರು ಸಹ ಕೂರಬಲ್ಲೆ ಎಂದರು. ಬಿಜೆಪಿಯನ್ನು ವಾಷಿಂಗ್ ಮೆಷಿನ್ ಎಂದು ಬಣ್ಣಿಸಿದ ಮಮತಾ, ಯಾರಾದರೂ ಬಿಜೆಪಿ ವಿರುದ್ಧ ಮಾತನಾಡಿದರೆ ಅವರ ಹಿಂದೆ ಸಿಬಿಐ ಮತ್ತು ಇಡಿಯನ್ನು ಕಳುಹಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ತಮ್ಮ ನಾಯಕರ ಮೇಲಿನ ಆರೋಪಗಳ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಒಂದೇ ಒಂದು ಉದಾಹರಣೆ ಇಲ್ಲ ಎಂದು ಆರೋಪಿಸಿದರು.

ವೇದಿಕೆಯ ಮೇಲೆ ತಂದಿದ್ದ ‘ಬಿಜೆಪಿ’ ಹೆಸರಿನ ವಾಷಿಂಗ್ ಮೆಷಿನ್‌ನಲ್ಲಿ ಮಮತಾ ಬ್ಯಾನರ್ಜಿ ಕಪ್ಪು ಬಟ್ಟೆಗಳನ್ನು ಹಾಕಿದರು. ಕೇಸರಿ ಪಾಳಯಕ್ಕೆ ಸೇರಿದ ಭ್ರಷ್ಟ ನಾಯಕರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು. 2024 ರ ಸಂಸತ್ ಚುನಾವಣೆಯು ದೇಶದ ನಾಗರಿಕರು ಮತ್ತು ಬಿಜೆಪಿ ನಡುವಿನ ಹೋರಾಟವಾಗಿದೆ. ಕೇಸರಿ ಪಕ್ಷವನ್ನು ಸೋಲಿಸಲು ಮತ್ತು ಬಡ ಜನರನ್ನು ಉಳಿಸಲು ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಪಾರ್ಸಿ - ಎಲ್ಲಾ ಧರ್ಮಗಳ ಜನರು ಒಂದಾಗಬೇಕು ಎಂದು ಹೇಳಿದರು. 

Advertisement

Advertisement

ಇದನ್ನೂ ಓದಿ: ಮಮತಾ ವಿರುದ್ಧದ ಹೇಳಿಕೆ: ಪ್ರಧಾನಿ ಮೋದಿ ವಿರುದ್ಧ ಅನರ್ಹತೆ ಕ್ರಮ ಜರುಗಿಸಲು ಟಿಎಂಸಿ ಪಟ್ಟು

ಬಿಜೆಪಿಯನ್ನು 'ದುಶ್ಯಾಸನ' ಮತ್ತು 'ದುರ್ಯೋಧನ' ಎಂದು ವ್ಯಾಖ್ಯಾನಿಸಿದ ಮಮತಾ, ಈ ಎರಡು ಪಾತ್ರಗಳು ಮಹಾಕಾವ್ಯದ ಮಹಾಭಾರತದ ಎರಡು ವಿರೋಧಿಗಳು. ಈ ದುಶ್ಶಾಸನ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಭಾರತದ ಪ್ರತಿಯೊಂದು ರಾಜಕೀಯ ಪಕ್ಷಗಳು ಒಗ್ಗೂಡಬೇಕೆಂದು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ದೇಶದ ಜನಸಾಮಾನ್ಯರನ್ನು ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಹೇಳಿದರು. 

ಕೇಸರಿ ಪಕ್ಷವನ್ನು ಹೆಸರಿಸದೆ ಮಮತಾ, ಕೆಲವರು ನನಗೆ ಸಂವಿಧಾನದ ಬಗ್ಗೆ ಕಲಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಏಳು ಬಾರಿ ಸಂಸದಳಾಗಿದ್ದೆ, ನಾಲ್ಕು ಬಾರಿ ಶಾಸಕಳಾದೆ. ಈ ಹಿಂದೆ ಕೋಲ್ಕತ್ತಾದ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಸಿಬಿಐ ಆಗಮಿಸಿದಾಗ ನಾನು ಕೂಡ ಪ್ರತಿಭಟನೆ ನಡೆಸಿದ್ದೆ. ಖ್ಯಮಂತ್ರಿಯಾಗಿ ಜಯಲಲಿತಾ ಅವರು ಕೂಡ ಧರಣಿ ನಡೆಸಿದ್ದರು. ನಮ್ಮ ಪಕ್ಷದ ಬ್ಯಾನರ್ ಅಡಿಯಲ್ಲಿ ಧರಣಿಯನ್ನು ಆಯೋಜಿಸಲಾಗುತ್ತಿದೆ, ಸರ್ಕಾರಕ್ಕಿಂತ ನಾನು ರಚಿಸಿದ ಪಕ್ಷವು ಮುಖ್ಯವಾಗಿದೆ ಎಂದರು. 

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ. ಏಕೆಂದರೆ ಅದರ ಮಿತ್ರಪಕ್ಷಗಳು ಪಕ್ಷವನ್ನು ತೊರೆದಿದ್ದಾರೆ. "ಬಿಜೆಪಿ ಪೀಕ್ ಟೈಮ್ ಮುಗಿದಿದೆ. ಅವರು ಅಧಿಕಾರಕ್ಕೆ ಬಂದಾಗ 17 ಮಿತ್ರರನ್ನು ಹೊಂದಿದ್ದರು. ಈಗ, 16 ಮಂದಿ ಅವರನ್ನು ತೊರೆದಿದ್ದರಿಂದ ಒಂಟಿಯಾಗಿದ್ದಾರೆ. ಅವರು ಒಬ್ಬರೇ ಏನು ಮಾಡುತ್ತಾರೆ, ಅವರು ಯುಪಿ ಮತ್ತು ಎಂಪಿಯಲ್ಲಿ ಮಾತ್ರ ಮತಗಳನ್ನು ಪಡೆಯುತ್ತಾರೆ ಎಂದರು. 

ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ಅಭಿಷೇಕ್: ಈ ಮಧ್ಯೆ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಕೆಂಪು ಕೋಟೆಯಲ್ಲಿ ಸಿಎಂ ಅವರ ಧರಣಿ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್, 2021 ರ ಬಂಗಾಳದ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಭಾಷಣಗಳಲ್ಲಿ ಮಮತಾ ಅವರನ್ನು ಅವಮಾನಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸದ ಸ್ಥಾನದಿಂದ ಏಕೆ ಅನರ್ಹಗೊಳಿಸುವುದಿಲ್ಲ ಎಂದು ರಾಹುಲ್ ಗಾಂಧಿಯವರ ಪಕ್ಕದಲ್ಲಿ ನಿಂತು ಕೇಳಿದರು.

ಇದನ್ನೂ ಓದಿ: ರಾಷ್ಟ್ರಗೀತೆಗೆ ಅಗೌರವ: ದೂರು ರದ್ದುಗೊಳಿಸುವಂತೆ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ಬಾಂಬೆ ಹೈಕೋರ್ಟ್ ನಲ್ಲಿ ವಜಾ

ಎರಡು ವರ್ಷಗಳ ಹಿಂದೆ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಮೋದಿಯವರು ಮಮತಾರನ್ನು "ದೀದಿ ಓ ದೀದಿ" ಎಂದು ಉಲ್ಲೇಖಿಸಿದಾಗ ಮಾತಿನ ರಾಜಕೀಯ ಯುದ್ಧವು ಪ್ರಾರಂಭವಾಯಿತು, ಇದು ಬಂಗಾಳದ ಮಹಿಳೆಯರನ್ನು ಗುರಿಯಾಗಿಸುವ ಅಗೌರವದ ಕಾಮೆಂಟ್ ಎಂದು ಟಿಎಂಸಿ ಆಕ್ರೋಶ ಹೊರಹಾಕಿತ್ತು. 

ಟಿಎಂಸಿಯ ಹಿರಿಯ ನಾಯಕರಾದ ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಸುಬ್ರತಾ ಬಕ್ಷಿ ಮತ್ತು ಸೋವಂದೇಬ್ ಚಟ್ಟೋಪಾಧ್ಯಾಯ ಅವರೊಂದಿಗೆ ಮಮತಾ ಅವರು ರೆಡ್ ರೋಡ್‌ನಲ್ಲಿರುವ ಬಿ ಆರ್ ಅಂಬೇಡ್ಕರ್ ಪ್ರತಿಮೆ ಎದುರು ಕೇಂದ್ರದ ತಾರತಮ್ಯ ಧೋರಣೆ ವಿರುದ್ಧ ಧರಣಿ ಧರಣಿ ಕುಳಿತಿದ್ದು ಇಂದು ಸಾಯಂಕಾಲದವರೆಗೆ ಮುಂದುವರಿಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement