ದೇಶ

ಕಾಂಗ್ರೆಸ್ ಒಬಿಸಿಗಳನ್ನು ಅವಮಾನಿಸಿದೆ, ಆದರೆ ಬಿಜೆಪಿ ಆ ಸಮುದಾಯಕ್ಕೆ ಪ್ರಧಾನಿ ಪಟ್ಟ ನೀಡಿದೆ: ಅಮಿತ್ ಶಾ

Lingaraj Badiger

ಅಹಮದಾಬಾದ್: ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಪ್ರತಿಪಕ್ಷ ಕಾಂಗ್ರೆಸ್ ಇತರ ಹಿಂದುಳಿದ ವರ್ಗಗಳಿಗೆ ಕಿರುಕುಳ ನೀಡಿದೆ ಮತ್ತು ಅವಮಾನ ಮಾಡಿದೆ ಎಂದು ಆರೋಪಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನರೇಂದ್ರ ಮೋದಿ ಅವರ ರೂಪದಲ್ಲಿ ದೇಶಕ್ಕೆ ಮೊದಲ ಒಬಿಸಿ ಪ್ರಧಾನಿಯನ್ನು ನೀಡಿದೆ ಎಂದು ಭಾನುವಾರ ಹೇಳಿದ್ದಾರೆ.

ಮೋದಿ ಸಮುದಾಯದ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಶಾ, ಬಡ ಕುಟುಂಬದಲ್ಲಿ ಹುಟ್ಟಿದ ಪ್ರಧಾನಿ ಮೋದಿ ಅವರು ಒಬಿಸಿಗಳಿಗೆ ಅರ್ಹವಾದ ಗೌರವವನ್ನು ನೀಡಿದರು ಮತ್ತು ಬಡವರ ನೋವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದರು.

ಮೋದಿ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈಲು ಶಿಕ್ಷೆಗೊಳಗಾದುದನ್ನು ಉಲ್ಲೇಖಿಸಿದ ಅಮಿತ್ ಶಾ, ಯಾರಾದರೂ ಒಬ್ಬ ವ್ಯಕ್ತಿಯನ್ನು ಅವಮಾನಿಸಿದರೆ ಅದು ದೊಡ್ಡ ವಿಷಯವಲ್ಲ, ಆದರೆ ಇಡೀ ಸಮುದಾಯವನ್ನು ಮತ್ತು ಪ್ರಧಾನಿಯನ್ನು ಅವಮಾನಿಸಿದರೆ, ಅದು ಇಡೀ ದೇಶಕ್ಕೆ ಮಾಡಿದ ಅವಮಾನ ಎಂದರು.

"ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಬಿಸಿಗಳನ್ನು ನಿರ್ಲಕ್ಷಿಸಿತು, ಕಿರುಕುಳ ನೀಡಿತು ಮತ್ತು ಅವಮಾನಿಸಿತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ, ಪ್ರಧಾನಿ ಮೋದಿ ಒಬಿಸಿ ಸಮುದಾಯಕ್ಕೆ ಸಿಗಬೇಕಾದ ಗೌರವವನ್ನು ನೀಡಿದರು ಮತ್ತು ಮೊದಲ ಬಾರಿಗೆ ಒಬಿಸಿ ಸಮುದಾಯದ ವ್ಯಕ್ತಿಯನ್ನು ಪ್ರಧಾನಿ ಮಾಡಿದ್ದು ಬಿಜೆಪಿ" ಎಂದು ಅಮಿತ್ ಶಾ ಹೇಳಿದ್ದಾರೆ.

SCROLL FOR NEXT