ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 
ದೇಶ

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದು ಕೂಡ ಅಪರಾಧವಾಗುತ್ತದೆ: ಪ್ರಧಾನಿ ನರೇಂದ್ರ ಮೋದಿ

Ramyashree GN

ಜೈಪುರ: ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ವ್ಯಕ್ತಿಯೊಬ್ಬರು ತಮ್ಮ ನಂಬಿಕೆಯನ್ನು ಅನುಸರಿಸುವುದು ಸಹ ಕಷ್ಟವಾಗಿರುತ್ತದೆ ಮತ್ತು ಜನರ ಸಂಪತ್ತನ್ನು ಕಿತ್ತುಕೊಂಡು 'ಆಯ್ದ' ಜನರಿಗೆ ಹಂಚಲು ಆಳವಾದ ಸಂಚು ರೂಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್‍ಯಾಲಿಯಲ್ಲಿ ಅವರು ಮಾಡಿದ 'ಸಂಪತ್ತಿನ ಮರುಹಂಚಿಕೆ' ಟೀಕೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಇದು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟವನ್ನು ತುಂಬಾ ಕೆರಳಿಸಿದೆ ಮತ್ತು ಅವರು ಮೋದಿಯನ್ನು ಎಲ್ಲೆಡೆ ನಿಂದಿಸಲು ಪ್ರಾರಂಭಿಸಿದ್ದಾರೆ. ನಿಮ್ಮ ಸಂಪತ್ತನ್ನು ಕಿತ್ತುಕೊಂಡು 'ಆಯ್ದ' ಜನರಿಗೆ ಹಂಚಲು ಕಾಂಗ್ರೆಸ್ ಆಳವಾದ ಪಿತೂರಿ ನಡೆಸುತ್ತಿದೆ ಎಂಬುದು ದೇಶದ ಮುಂದೆ ಬಯಲಾಗಿದೆ' ಎಂದು ಅವರು ಟೋಂಕ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಹೇಳಿದರು.

ಎರಡ್ಮೂರು ದಿನಗಳ ಹಿಂದೆ ನಾನು ಕಾಂಗ್ರೆಸ್ಸಿನ ಈ ವೋಟ್ ಬ್ಯಾಂಕ್ ರಾಜಕಾರಣವನ್ನು ತುಷ್ಟೀಕರಣ ರಾಜಕಾರಣ ಎಂದು ಬಯಲಿಗೆಳೆದಿದ್ದೆ. ಇದು ಕಾಂಗ್ರೆಸ್ ಮತ್ತು ಅದರ ಇಂಡಿಯಾ ಮೈತ್ರಿಕೂಟವನ್ನು ಎಷ್ಟು ಕೆರಳಿಸಿದೆ ಎಂದರೆ ಅವರು ಮೋದಿಯನ್ನು ಹೋದಲ್ಲೆಲ್ಲಾ ನಿಂದಿಸಲು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಏಕೆ ಸತ್ಯಕ್ಕೆ ಹೆದರುತ್ತಿದೆ ಮತ್ತು ತನ್ನ ನೀತಿಗಳನ್ನು ಮರೆಮಾಚುತ್ತಿದೆ ಎಂದು ಕೇಳಿದರು.

ಸಂಪತ್ತಿನ ಸಮೀಕ್ಷೆ ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಸಂಪತ್ತಿನ ಎಕ್ಸ್ ರೇ ಮಾಡುವುದಾಗಿ ಅದರ ನಾಯಕರೊಬ್ಬರು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದರೆ, ಮೋದಿ ಈ ರಹಸ್ಯವನ್ನು ಬಯಲು ಮಾಡಿದಾಗ ಅವರ ಹಿಡನ್ ಅಜೆಂಡಾ ಹೊರಬಿತ್ತು ಮತ್ತು ಅವರಿಗೆ ಈಗ ಭಯ ಶುರುವಾಗಿದೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ವ್ಯಕ್ತಿಯೊಬ್ಬರು ತಮ್ಮ ನಂಬಿಕೆಯನ್ನು ಅನುಸರಿಸುವುದು ಕಷ್ಟ. ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಕೂಡ ಅಪರಾಧವಾಗುತ್ತದೆ ಎಂದರು.

ದೇಶದಾದ್ಯಂತ ಇಂದು ಹನುಮ ಜಯಂತಿಯನ್ನು ಆಚರಿಸುತ್ತಿದ್ದು, ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT