ಸಲ್ಮಾನ್ ಖಾನ್ 
ದೇಶ

ನಟ ಸಲ್ಮಾನ್ ಖಾನ್ ನಿವಾಸದ ಹೊರಗಡೆ ಗುಂಡಿನ ದಾಳಿ: ಪಂಜಾಬ್‌ನಲ್ಲಿ ಮತ್ತಿಬ್ಬರು ಬಂಧನ

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗಡೆ ಇತ್ತೀಚಿಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಗುರುವಾರ ಪಂಜಾಬ್‌ನಲ್ಲಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗಡೆ ಇತ್ತೀಚಿಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಗುರುವಾರ ಪಂಜಾಬ್‌ನಲ್ಲಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರೂ ಮಾರ್ಚ್ 15 ರಂದು ಶೂಟರ್‌ಗಳಿಗೆ ಶಸ್ತ್ರಾಸ್ತ್ರ ಮತ್ತು ಕಾಟ್ರಿಡ್ಜ್‌ಗಳನ್ನು ಒದಗಿಸಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಬ್ಬರನ್ನೂ ಕ್ರೈಂ ಬ್ರಾಂಚ್ ತಂಡ ಬಂಧಿಸಿದ್ದು, ಮುಂಬೈಗೆ ಕರೆತರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಇದೇ ಪ್ರಕರಣದಲ್ಲಿ ಬಂಧಿಸಲಾದ ಮತ್ತಿಬ್ಬರನ್ನು ಮುಂಬೈ ನ್ಯಾಯಾಲಯವು ಏಪ್ರಿಲ್ 29 ರವರೆಗೆ ಪೊಲೀಸ್ ಕಸ್ಟಡಿಯನ್ನು ಗುರುವಾರ ವಿಸ್ತರಿಸಿದೆ. ಬಿಹಾರದ ನಿವಾಸಿಗಳಾದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಅವರ ರಿಮಾಂಡ್ ಕೊನೆಗೊಂಡ ನಂತರ ಇಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಗುಪ್ತಾ ಮತ್ತು ಪಾಲ್ ಏಪ್ರಿಲ್ 14 ರ ಮುಂಜಾನೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ 58 ವರ್ಷದ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿ, ಮೊಬೈಕ್ ನಲ್ಲಿ ಅಲ್ಲಿಂದ ಪರಾರಿಯಾಗಿದ್ದರು.

ಅವರನ್ನು ಏಪ್ರಿಲ್ 16 ರಂದು ಗುಜರಾತ್‌ನ ಕಚ್ ಜಿಲ್ಲೆಯ ಮಾತಾ ನೊ ಮಧ್ ಗ್ರಾಮದಿಂದ ಬಂಧಿಸಲಾಗಿತ್ತು. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಈ ಪ್ರಕರಣದಲ್ಲಿ ಬೇಕಾಗಿರುವ ಆರೋಪಿಗಳೆಂದು ಪೊಲೀಸರು ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ; BJP, RSS, ECಯಿಂದ ದೇಶದ್ರೋಹ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

EC ಬಿಕ್ಕಟ್ಟು: ಜ್ಞಾನೇಶ್ ಕುಮಾರ್ ವಿರುದ್ಧ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು; ವಿಫಲವಾದರೆ ಸೇನೆ ಮಧ್ಯಪ್ರವೇಶಿಸಲಿ-Sanjay Raut

ಮೀರಾಬಾಯಿ ಚಾನುಗೆ ಬೆಳ್ಳಿ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!

Asian Games 2026: ಭಾರತಕ್ಕೆ ಶೂಟಿಂಗ್‌ನಿಂದ ಮತ್ತೊಂದು ಪದಕ; ಪುರುಷರ ಸ್ಕೀಟ್ ತಂಡಕ್ಕೆ ಕಂಚು