ಸಮುದಾಯ ಅಡುಗೆಮನೆಗಳ ಪರಿಕಲ್ಪನೆಯನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಸಮುದಾಯ ಅಡುಗೆಮನೆಗಳ ಪರಿಕಲ್ಪನೆಯನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ 
ದೇಶ

ಸಮುದಾಯ ಪಾಕ ಶಾಲೆ ಪರಿಕಲ್ಪನೆ ಜಾರಿಗೊಳಿಸಲು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ಅಸಾಧ್ಯ: ಸುಪ್ರೀಂ

Srinivas Rao BV

ನವದೆಹಲಿ: ಸಮುದಾಯ ಪಾಕ ಶಾಲೆ ಪರಿಕಲ್ಪನೆಯನ್ನು ಜಾರಿಗೊಳಿಸಲು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ರೀತಿಯ ಪರ್ಯಾಯ ಯೋಜನೆಗಳಿಗೆ ಎನ್ಎಫ್ಎಸ್ಎ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ) ಅಡಿಯಲ್ಲಿ ಅವಕಾಶ ಇರುವುದರಿಂದ ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾ. ಬೆಲಾ ಎಂ ತ್ರಿವೇದಿ ಹಾಗೂ ಪಂಕಂಜ್ ಮಿಥಲ್ ಅವರಿದ್ದ ಪೀಠ, ನೀತಿಯ ಕಾನೂನುಬದ್ಧತೆ ಮಾತ್ರವೇ ನ್ಯಾಯಾಂಗ ಪರಿಶೀಲನೆಯ ವಿಷಯವಾಗಿದೆ ಮತ್ತು ನೀತಿಯ ಜ್ಞಾನ ಅಥವಾ ದೃಢತೆ ಅಲ್ಲ ಎಂದು ಹೇಳಿದೆ. ಹಸಿವು, ಅಪೌಷ್ಟಿಕತೆ ಮತ್ತು ಹಸಿವು ಮತ್ತು ಅದರಿಂದಾಗುವ ಸಾವುಗಳನ್ನು ಎದುರಿಸಲು ಸಮುದಾಯ ಪಾಕಶಾಲೆ (community kitchen) ಪರಿಕಲ್ಪನೆಯನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಲೇವಾರಿ ಮಾಡುವಾಗ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸುವ 'ಹಕ್ಕು-ಆಧಾರಿತ ವಿಧಾನ'ದೊಂದಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯು ಜಾರಿಯಲ್ಲಿದೆ ಮತ್ತು ಈ ಕಾಯ್ದೆಯಡಿಯಲ್ಲಿ ಇತರ ಕಲ್ಯಾಣ ಯೋಜನೆಗಳನ್ನು ಸಹ ಭಾರತ ಒಕ್ಕೂಟವು ರೂಪಿಸಿ ಜಾರಿಗೊಳಿಸಿದೆ. ರಾಜ್ಯಗಳು, ಜನರು ಘನತೆಯಿಂದ ಜೀವನ ನಡೆಸಲು ಕೈಗೆಟಕುವ ಬೆಲೆಯಲ್ಲಿ ಸಾಕಷ್ಟು ಪ್ರಮಾಣದ ಗುಣಮಟ್ಟದ ಆಹಾರದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, "ನಾವು ಆ ನಿಟ್ಟಿನಲ್ಲಿ ಯಾವುದೇ ಹೆಚ್ಚಿನ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

"NFSA ಉದ್ದೇಶವನ್ನು ಸಾಧಿಸಲು ಸಮುದಾಯ ಪಾಕಶಾಲೆ (community kitchen) ಪರಿಕಲ್ಪನೆ ರಾಜ್ಯಗಳಿಗೆ ಲಭ್ಯವಿರುವ ಉತ್ತಮ ಅಥವಾ ಬುದ್ಧಿವಂತ ಪರ್ಯಾಯವಾಗಿದೆಯೇ ಎಂಬುದನ್ನು ನಾವು ಪರಿಶೀಲಿಸಿಲ್ಲ, ಬದಲಿಗೆ ನಾವು ಅಂತಹ ಪರ್ಯಾಯ ಕಲ್ಯಾಣ ಯೋಜನೆಗಳನ್ನು ಅನ್ವೇಷಿಸಲು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ವಿವೇಚನೆಗೆ ಬಿಡಲು ಬಯಸುತ್ತೇವೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.

SCROLL FOR NEXT