ಹಾವು ಕಡಿತ (ಸಾಂಕೇತಿಕ ಚಿತ್ರ) PTI
ದೇಶ

45 ದಿನಗಳಲ್ಲಿ 5 ಬಾರಿ ಹಾವು ಕಡಿತ, ಆದರೂ ಬದುಕಿ ಉಳಿದ ವ್ಯಕ್ತಿ; ವೈದ್ಯರಿಗೇ ಅಚ್ಚರಿ!

ಹಾವುಗಳ ಕಡಿತಕ್ಕೊಳಗಾಗಿದ್ದ ವಿಕಾಸ್ ದುಬೆ ಎಂಬಾತ ತನ್ನ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದ. ಆದರೆ ಅಲ್ಲಿಯೂ ಆತನಿಗೆ ಹಾವುಗಳ ಕಾಟ ಮುಂದುವರೆದಿದೆ.

ಲಖನೌ: ಉತ್ತರ ಪ್ರದೇಶದ ಫತೇಫುರ್ ನಲ್ಲಿ ವ್ಯಕ್ತಿಯೋರ್ವ 2 ತಿಂಗಳ ಅವಧಿಯಲ್ಲಿ 5 ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದು, ಚೇತರಿಸಿಕೊಂಡಿದ್ದಾರೆ.

ವೈದ್ಯಕೀಯ ಲೋಕಕ್ಕೂ ಈ ವ್ಯಕ್ತಿ ಚೇತರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಹಾವುಗಳ ಕಡಿತಕ್ಕೊಳಗಾಗಿದ್ದ ವಿಕಾಸ್ ದುಬೆ ಎಂಬಾತ ತನ್ನ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದ. ಆದರೆ ಅಲ್ಲಿಯೂ ಆತನಿಗೆ ಹಾವುಗಳ ಕಾಟ ಮುಂದುವರೆದಿದೆ.

ವಿಕಾಸ್ ದುಬೆಗೆ ಜೂ.02 ರಂದು ರಾತ್ರಿ ಮೊದಲ ಬಾರಿಗೆ ಹಾವು ಕಚ್ಚಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಆತ 2 ದಿನಗಳ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದ. ಇದಾದ ಬಳಿಕ ಜೂ.10 ರಂದು ಮತ್ತೊಮ್ಮೆ ಹಾವು ಕಚ್ಚಿತ್ತು, ಮತ್ತೆ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದ ಆತ ಈ ಬಾರಿ ಹಾವುಗಳ ಬಗ್ಗೆ ಎಚ್ಚರದಿಂದ ಇರತೊಡಗಿದ.

7 ದಿನಗಳ ನಂತರ ಜೂ.17 ರಂದು ಮತ್ತೊಮ್ಮೆ ಹಾವು ಕಡಿತಕ್ಕೆ ಒಳಗಾಗಿ ಪ್ರಜ್ಞಾಹೀನನಾಗಿದ್ದ. ಮತ್ತೆ 4 ನೇ ಬಾರಿಯೂ ಈ ಘಟನೆ ಪುನರಾವರ್ತನೆಯಾದ ಹಿನ್ನೆಲೆಯಲ್ಲಿ ಆತನನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿಯೂ ಇದೇ ಘಟನೆ ನಡೆದಿದೆ.

ವಿಕಾಸ್ ದುಬೆಗೆ ಚಿಕಿತ್ಸೆ ನೀಡಿದ ವೈದ್ಯ ಜವಾಹರ್ ಲಾಲ್, ಈ ಪ್ರಕರಣವನ್ನು "ವಿಚಿತ್ರ" ಎಂದು ಹೇಳಿದ್ದಾರೆ. ಮೂರನೇ ಬಾರಿ ಹಾವು ಕಚ್ಚಿದ ಬಳಿಕ, ದುಬೆಗೆ ಹಳ್ಳಿಯಿಂದ ಹೊರಗೆ ಹೋಗುವಂತೆ ವೈದ್ಯರು ಸಲಹೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್