ಕೋಝಿಕೋಡ್: ನಿಫಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ಮಲಪ್ಪುರಂನ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ 10.50 ಕ್ಕೆ ಪಾಂಡಿಕ್ಕಾಡ್ ನಲ್ಲಿ ನಿಫಾ ವೈರಸ್ ಗೆ ತುತ್ತಾಗಿದ್ದ ಬಾಲಕ ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ ಎಂದು ವೀಣಾ ಜಾರ್ಜ್ ಹೇಳಿದರು.
ಬಾಲಕ ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದ. ಇಂದು ಬೆಳಗ್ಗೆ ಮೂತ್ರ ಹೋಗುವುದು ನಿಂತಿತು. ಭಾರೀ ಹೃದಯ ಸ್ತಂಭನದ ನಂತರ, 11.30ರ ಹೊತ್ತಿಗೆ ನಿಧನ ಹೊಂದಿದ್ದಾನೆ ಎಂದು ಸಚಿವೆ ತಿಳಿಸಿದ್ದು, ನಿಫಾ ವೈರಸ್ ನ ಅಂತಾರಾಷ್ಟ್ರೀಯ ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ ಎಂದರು.
ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಹಾಗೂ ಕುಟುಂಬದವರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಅಂತ್ಯಸಂಸ್ಕಾರದ ಕುರಿತು ಹೆಚ್ಚಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.