ಪಾಟ್ನಾ: 17 ಮಂದಿ ಪ್ರಯಾಣಿಸುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಪಲ್ಟಿಯಾಗಿದೆ. ಬಿಹಾರದ ರಾಜಧಾನಿ ಪಾಟ್ನಾದ ಬಾರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅದೃಷ್ಟವಶಾತ್ 11 ಮಂದಿ ಈಡಿ ದಡ ಸೇರಿದ್ದರೆ ಆರು ಮಂದಿ ನಾಪತ್ತೆಯಾಗಿದ್ದಾರೆ.
ನದಿ ಮಧ್ಯೆಯಲ್ಲಿ ದೋಣಿ ಮುಳುಗಿದ್ದು ತಕ್ಷಣ ಎಲ್ಲರೂ ನದಿಯಲ್ಲಿ ಮುಳುಗಲು ಪ್ರಾರಂಭಿಸಿದರು. ಇಂತರ ಸಂದರ್ಭದಲ್ಲೂ ಹೇಗೋ 11 ಜನ ಈಜಿ ದಡ ಸೇರಿದ್ದರೆ ಇನ್ನೂ ಆರು ಮಂದಿ ನಾಪತ್ತೆಯಾಗಿದ್ದಾರೆ.
ಗಂಗಾ ದಸರಾ ನಿಮಿತ್ತ ಕೆಲವರು ಸ್ನಾನ ಮಾಡಲು ನದಿಗೆ ಅಡ್ಡಲಾಗಿ ದೋಣಿಯಲ್ಲಿ ಹೋಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವೇಳೆ ಉಮಾ ಘಾಟ್ ಬಳಿ ದೋಣಿ ಪಲ್ಟಿಯಾಗಿದೆ. ದುರಂತದಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಹಲವು ಜಿಲ್ಲೆಗಳಿಂದ ಗಂಗಾಸ್ನಾನಕ್ಕೆ ಆಗಮಿಸುವ ಪ್ರಸಿದ್ಧ ಉಮಾನಾಥ ಘಾಟ್‌ನಲ್ಲಿ ಪೊಲೀಸ್ ಆಡಳಿತ ಯಾವುದೇ ವ್ಯವಸ್ಥೆ ಮಾಡಿಲ್ಲ ಅಥವಾ ಸಾಕಷ್ಟು ಪೊಲೀಸರನ್ನು ನಿಯೋಜಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.