ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ  
ದೇಶ

ಲೋಕಸಭೆ ಚುನಾವಣೆ ಮುಗಿದ ಮೇಲೆ SBI ಚುನಾವಣಾ ಬಾಂಡ್ ವಿವರ ಸಲ್ಲಿಸಲು ಬಿಜೆಪಿ ಪ್ರಯತ್ನ: ಖರ್ಗೆ ಟೀಕೆ

Sumana Upadhyaya

ನವದೆಹಲಿ: ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಹೆಚ್ಚಿನ ಸಮಯ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಮೋದಿ ಸರ್ಕಾರವು ತನ್ನ ಸಂಶಯಾಸ್ಪದ ಅಕ್ರಮ ವ್ಯವಹಾರಗಳನ್ನು ಮರೆಮಾಚಲು ಎಸ್‌ಬಿಐಯನ್ನು ಬಳಸಿಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ.

ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಣೆಯನ್ನು ಕೋರಿ ಎಸ್‌ಬಿಐ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಕಳೆದ ವಾರ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ನಂತರ, ಮಾರ್ಚ್ 6 ರೊಳಗೆ ಭಾರತೀಯ ಚುನಾವಣಾ ಆಯೋಗಕ್ಕೆ (EC) ವಿವರಗಳನ್ನು ಒದಗಿಸುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮಟ್ಟಹಾಕಲು ಮೋದಿ ಸರ್ಕಾರ ಎಸ್‌ಬಿಐನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮೋದಿ ಸರ್ಕಾರದ 'ಕಪ್ಪುಹಣ ಪರಿವರ್ತನೆ ಯೋಜನೆ' ಚುನಾವಣಾ ಬಾಂಡ್‌ಗಳನ್ನು 'ಅಸಂವಿಧಾನಿಕ', 'ಆರ್‌ಟಿಐ ಉಲ್ಲಂಘನೆ' ಮತ್ತು 'ಕಾನೂನುಬಾಹಿರ' ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಾರ್ಚ್ 6 ರೊಳಗೆ ದಾನಿಗಳ ವಿವರಗಳನ್ನು ಒದಗಿಸುವಂತೆ ಎಸ್‌ಬಿಐಗೆ ಸೂಚಿಸಿತ್ತು ಎಂದಿದ್ದಾರೆ.

ಆದರೆ ಜೂನ್ 30 ರೊಳಗೆ ಲೋಕಸಭಾ ಚುನಾವಣೆಯ ನಂತರ ಇದನ್ನು ಮಾಡಬೇಕೆಂದು ಬಿಜೆಪಿ ಬಯಸುತ್ತದೆ, ಲೋಕಸಭೆಯ ಅಧಿಕಾರಾವಧಿಯು ಜೂನ್ 16 ರಂದು ಕೊನೆಗೊಳ್ಳಲಿದೆ, ಇದು ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಮೋದಿ ಸರ್ಕಾರ ಮಾಡುತ್ತಿರುವ ತಂತ್ರ ಎಂದು ಆರೋಪಿಸಿದರು.

‘ಮೋಸದ’ ಚುನಾವಣಾ ಬಾಂಡ್‌ ಯೋಜನೆಯ ಪ್ರಮುಖ ಫಲಾನುಭವಿ ಬಿಜೆಪಿ ಎಂದು ಆರೋಪಿಸಿದ ಖರ್ಗೆ, ‘ಹೆದ್ದಾರಿ, ಬಂದರು, ವಿಮಾನ ನಿಲ್ದಾಣ, ವಿದ್ಯುತ್‌ ಸ್ಥಾವರಗಳ ಗುತ್ತಿಗೆಯನ್ನು ಪ್ರಧಾನಿಗೆ ಹಸ್ತಾಂತರಿಸಿರುವ ಬಿಜೆಪಿಯ ಕರಾಳ ವ್ಯವಹಾರಗಳನ್ನು ಸರ್ಕಾರ ಅನುಕೂಲಕರವಾಗಿ ಮರೆಮಾಚುತ್ತಿದೆಯೇ? ದಾನಿಗಳ 44,434 ಸ್ವಯಂಚಾಲಿತ ಅಂಕಿಅಂಶ ನಮೂದುಗಳನ್ನು ಕೇವಲ 24 ಗಂಟೆಗಳಲ್ಲಿ ಬಹಿರಂಗಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ಮಾಹಿತಿಯನ್ನು ಒಟ್ಟುಗೂಡಿಸಲು ಎಸ್‌ಬಿಐಗೆ ಇನ್ನೂ ನಾಲ್ಕು ತಿಂಗಳು ಸಮಯಾವಕಾಶ ಏಕೆ ಬೇಕು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ಮಾತನಾಡಿ, ದಾನಿಗಳ ಮಾಹಿತಿಯು ಸಾರ್ವಜನಿಕವಾದ ತಕ್ಷಣ ಬಿಜೆಪಿಯು ತನ್ನ "ಆಯ್ದ ಕಾರ್ಪೊರೇಟ್‌ಗಳೊಂದಿಗಿನ ತನ್ನ ಅಪವಿತ್ರ ನಂಟು" ಬಹಿರಂಗಗೊಳ್ಳುತ್ತದೆ ಎಂಬ ಭೀತಿಗೆ ಒಳಗಾಗಿದೆ ಎಂದು ಟೀಕಿಸಿದ್ದಾರೆ.

SCROLL FOR NEXT